Select Your Language

Notifications

webdunia
webdunia
webdunia
webdunia

3ನೇ ಅಲೆ ಭೀತಿ, ಅಪಾರ್ಟ್ಮೆಂಟ್ಗಳಿಗೆ ಬಿಬಿಎಂಪಿಯಿಂದ ಟಫ್ ರೂಲ್ಸ್

3ನೇ ಅಲೆ ಭೀತಿ, ಅಪಾರ್ಟ್ಮೆಂಟ್ಗಳಿಗೆ ಬಿಬಿಎಂಪಿಯಿಂದ ಟಫ್ ರೂಲ್ಸ್
ಬೆಂಗಳೂರು , ಬುಧವಾರ, 18 ಆಗಸ್ಟ್ 2021 (08:09 IST)
ಬೆಂಗಳೂರು: ನಗರದ ಅಪಾರ್ಟ್ಮೆಂಟ್ ಗಳಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ಗಳಿಗೆ ಹೊಸ ರೂಲ್ಸ್ ಮಾಡಿದೆ ಪಾಲಿಕೆ. ಈಗಾಗಲೇ ನಗರದ ಅಪಾರ್ಟ್ಮೆಂಟ್ ಗಳಲ್ಲಿ ಕೊರೋನಾ ಸೋಂಕು ಸ್ಫೋಟಗೊಳ್ಳುತ್ತಿದ್ದು, ಮೂರನೇ ಅಲೆ ಆರಂಭವೇ ಎಂಬ ಅನುಮಾನ ಮೂಡತೊಡಗಿದೆ.  ಸದ್ಯ ನಗರದ ಅಪಾರ್ಟ್ಮೆಂಟ್ ಗಳಲ್ಲೇ ಬಹುತೇಕ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ.

ಈಗಾಗಲೇ ನಗರದಲ್ಲಿ ಕೊರೋನಾ ಕಂಟ್ರೋಲ್ ಮಾಡುವುದಕ್ಕೆ ಹಲವು ಕ್ರಮಗಳನ್ನು ಪಾಲಿಕೆ ಪಾಲಿಸಲು ಮುಂದಾಗಿವೆಯಾದರೂ, ಅಪಾರ್ಟ್ಮೆಂಟ್ ಗಳಲ್ಲಿ ಕೊರೋನಾ ಹರಡುವಿಕೆಯನ್ನು ತಡೆಯುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಅಪಾರ್ಟ್ಮೆಂಟ್ ಗಳಿಗೆಂದೇ ಬಿಬಿಎಂಪಿ ವಿಶೇಷ ನಿಯಮಾವಳಿಗಳನ್ನು ಜಾರಿಮಾಡಿ, ಪಾಲಿಸುವಂತೆ ಆದೇಶ ಹೊರಡಿಸಿದೆ.
3ನೇ ಅಲೆ ತಡೆಯಲು ಬಿಬಿಎಂಪಿಯಿಂದ ಅಪಾರ್ಟ್ಮೆಂಟ್ ಗಳಿಗೆ ಹೊಸ ರೂಲ್ಸ್.!!
1. ಅಪಾರ್ಟ್ಮೆಂಟ್ಗೆ, ಮನೆಗಳಿಗೆ ಡೆಲಿವರಿ ಮಾಡುವವರು, ಭೇಟಿ ನೀಡುವವರು, ಮನೆ ಕೆಲಸದವರಿಗೆ  ಟೆಂಪ್ರೇಚರ್ ಚೆಕ್ ಮಾಡಿ, ಮಾಸ್ಕ್ ಕಡ್ಡಾಯ
2. ಬೇರೆ ಏರಿಯಾದವರು ಬಂದರೆ ಅವರ ವಿಳಾಸ ಬರೆದಿಟ್ಟುಕೊಳ್ಳಬೇಕು
3. ‎ನಿವಾಸಿಗಳು ಯಾರಾದರೂ ಅಂತಾರಾಜ್ಯ ಪ್ರಯಾಣ ಮಾಡಿದರೆ ಅಥವಾ ಪ್ರಯಾಣ ಮಾಡಿ ಬಂದರೆ ಕೋವಿಡ್ ಟೆಸ್ಟ್ ಗೆ ಸೂಚಿಸಬೇಕು
4. ‎ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿ ಹೋಂ ಕ್ವಾರಂಟೈನ್ ನಲ್ಲಿ ಇರಬೇಕು
5. ‎ನಾಯಿ ಜೊತೆ ವಾಕಿಂಗ್  ಹೋಗುವರು ಕೋವಿಡ್ ರೂಲ್ಸ್ ಫಾಲೋ ಮಾಡಬೇಕು. ಓಪನ್ ಸ್ಪೆಸ್ ಇರುವ ಜಾಗದಲ್ಲಿ ವಾಕ್ ಹೋಗಬೇಕು
6. ‎ಅಪಾರ್ಟ್ಮೆಂಟ್ ನಿವಾಸಿಗಳು ಕೇರಳ, ಮಹಾರಾಷ್ಟ್ರಕ್ಕೆ ಹೋಗಿ ಬಂದರೆ ಸರ್ಕಾರದ ರೂಲ್ಸ್ ಫಾಲೋ ಮಾಡೋಕೆ ತಿಳಿಸಬೇಕು
7. ‎ವಾಕಿಂಗ್, ಜಾಗಿಂಗ್, ಓಡಾಡುವ ಸ್ಥಳಗಳಲ್ಲಿ ಕೊವಿಡ್ ರೂಲ್ಸ್ ಫಾಲೋ ಮಾಡಬೇಕು
8. ‎ಕ್ಲಬ್ ಹೌಸ್, ಕಮ್ಯೂನಿಟಿ ಹಾಲ್ ಜೊತೆಗೆ ರೆಸಿಡೆನ್ಸಿಯಲ್  ವ್ಯಾಪ್ತಿಗೆ ಬರುವ ಓಪನ್ ಜಾಗದಲ್ಲಿ ಸಭೆ ಸಮಾರಂಭ ಆದಷ್ಟು ಕಡಿಮೆ ಮಾಡಬೇಕು
9. ವ್ಯಾಪಾರಸ್ಥರು, ಡೆಲಿವರಿ ಬಾಯ್ಸ್ ಮತ್ತು ಕೊರಿಯರ್ ಸೇವೆ ಮಿತವಾಗಿರಲಿ
10. ಈ ಸೇವೆಗಳನ್ನ ಅಪಾರ್ಟ್ಮೆಂಟ್ನಾ  ಎಂಟ್ರಿ ಗೇಟ್ ಬಳಿಯೇ ಇರಿಸಿ ತೆಗೆದುಕೊಳ್ಳಿ
11. ‎3 ವರ್ಷ ಮೇಲ್ಪಟ್ಟ  ಮಕ್ಕಳಿಗೆ ಕಡ್ಟಾಯವಾಗಿ ಮಾಸ್ಕ್ ಹಾಕಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು
12. ‎ ಜಿಮ್, ಸ್ಪೋರ್ಟ್ಸ್ ಪ್ಲೇಸ್ ಗಳಲ್ಲಿ ಗುಂಪು ಗೂಡಬಾರದು ಮತ್ತೆ ಅ ಜಾಗದಲ್ಲಿ 50% ಅಷ್ಟು ಜನ ಇರಬೇಕು. ಜೊತೆಗೆ ಮೀಟಿಂಗ್ ಸಭೆ ಮಾಡುವ ಆಗಿಲ್ಲ
13. ‎ಅಪಾರ್ಟ್ಮೆಂಟ್ ಮತ್ತು ಮನೆಗಳಲ್ಲಿ ತುರ್ತಾಗಿ ಪ್ಲಂಬಿಗ್, ಎಲೆಕ್ಟ್ರಿಕ್ ಸರ್ವಿಸ್, ಕುಕ್ಕಿಂಗ್ ಸರ್ವಿಸ್ ಇದ್ದರೆ ಕೊರೋನಾ ನಿಯಮ ಪಾಲಿಸಿ ಸರ್ವಿಸ್ ಪಡೆಯಿರಿ
ಹೀಗೆ ಅಪಾರ್ಟ್ಮೆಂಟ್ಗಳಲ್ಲಿ ಕೊರೋನಾ ಕಂಟ್ರೋಲ್ಗೆ ಹೊಸ ರೂಲ್ಸ್ ಅನ್ನು
ಬಿಬಿಎಂಪಿ ಮಾಡಿಕೊಂಡಿದೆ. ಆದರೆ ಪಾಲಿಕೆ ಹೊಸ ಪ್ಲ್ಯಾನ್ ಎಷ್ಟರ ಮಟ್ಟಿಗೆ ಸಕಸ್ಸ್ ಆಗಲಿದೆ ಎನ್ನುವುದೇ ಸದ್ಯದ ಪ್ರಶ್ನೆ. ಪಾಲಿಕೆಯ ಈ ಹೊಸ ರೂಲ್ಸ್ ಜನರು ಕಟ್ಟು ನಿಟ್ಟಾಗಿ ಫಾಲೋ ಮಾಡಿದರೆ ಸೋಂಕು ಕಂಟ್ರೋಲ್ ಸಾಧ್ಯವಿದೆ ಎಂಬ ಅಭಿಪ್ರಾಯವನ್ನು ಹಿರಿಯ ತಜ್ಞ ವೈದ್ಯರು ವ್ಯಕ್ತಪಡಿಸುತ್ತಿದ್ದಾರೆ.
ಆಗಸ್ಟ್ ಅರ್ಧಕ್ಕೆಲ್ಲಾ ಮೂರನೇ ಅಲೆ ಆರಂಭಗೊಂಡು ಸೋಂಕು ತೀವ್ರವಾಗಿ ಹರಡ ಬೇಕಿತ್ತು. ಆದರೆ ಅದೃಷ್ಟವಶಾತ್ ಇನ್ನೂ ಸ್ಥಿತಿ ಬಹಳ ಸುಧಾರಿಸುವ ರೀತಿಯಲ್ಲಿದೆ. ಆದರೂ ಅಪಾರ್ಟ್ಮೆಂಟ್ ಗಳಲ್ಲಿ ಸೋಂಕು ಹೆಚ್ಚುತ್ತಿರುವುದು ಬಹಳ ಅಪಾಯಕಾರಿ ಬೆಳವಣಿಗೆ. ಈಗ ಬಿಬಿಎಂಪಿ ಹೊರಡಿಸಿರುವ ಈ ನಿಯಮ ಪಾಲನೆ ಮಾಡಿದರೆ ಮತ್ತಷ್ಟು ರಿಲೀಫ್ ಸಿಗಲಿದೆ ಎಂದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ. ರಾಮಚಂದ್ರ ನ್ಯೂಸ್ 18 ಕನ್ನಡಕ್ಕೆ ಹೇಳಿಕೆ ಕೊಟ್ಟಿದ್ದಾರೆ.
ತಜ್ಞರ ಪ್ರಕಾರ ಇಷ್ಟೊತ್ತಿಗೆಲ್ಲಾ ಕೊರೋನಾ ಮೂರನೇ ಅಲೆ ಅಪ್ಪಳಿಸಬೇಕಿತ್ತು. ಆದರೆ ಅದೃಷ್ಟವಶಾತ್ ಪರಿಸ್ಥಿತಿ ಮತ್ತಷ್ಟು ಸುಧಾರಿಸುವ ಹಾದಿಯಲ್ಲಿದೆ. ಆದರೂ ನಿರ್ಲಕ್ಷ್ಯ ಮಾಡದೆ ಕೊರೋನಾ ಎಎಸ್ಓಪಿಗಳನ್ನು ಪಾಲನೆ ಮಾಡುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ. ಇದೀಗ ಅಪಾರ್ಟ್ಮೆಂಟ್ ಗಳಿಗೂ ಸಪರೇಟ್ ರೂಲ್ಸ್ ಮಾಡಿರುವ ಪಾಲಿಕೆ, ಸೋಂಕು ಸ್ಫೋಟಗೊಂಡಿರುವ ಅಪಾರ್ಟ್ಮೆಂಟ್ ಗಳನ್ನು ಮೈಕ್ರೋ ಕಂಟೈನ್ಮೆಟ್ ಪ್ರದೇಶದ ವ್ಯಾಪ್ತಿಯಿಂದ ಹೊರ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ನೈಟ್ಕರ್ಫ್ಯೂ ಆ.30ರವರೆಗೆ ವಿಸ್ತರಣೆ: ಯಾವುದಕ್ಕೆಲ್ಲಾ ಅನುಮತಿ?