Publish Date: Sun, 26 Nov 2023 (18:42 IST)
Updated Date: Sun, 26 Nov 2023 (18:51 IST)
ವಿದ್ಯುತ್ ಸ್ಪರ್ಶಿಸಿ ಕ್ರಿಕೆಟ್ ಆಡುತ್ತಿದ್ದ 16 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಧಾರವಡದ ಸಿದ್ಧರಾಮೇಶ್ವರ ಕಾಲೋನಿಯಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಕೆಲವು ಹುಡುಗರು ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಹತ್ತಿರದ ನಿರ್ಮಾಣದ ಸ್ಥಳವೊಂದರಲ್ಲಿ ಬಿದ್ದಿದೆ ಎಂದು ಹೇಳಲಾಗಿದೆ.
ಚೆಂಡನ್ನು ತರಲು ಹೋದ ಶ್ರೇಯಸ್ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ತೀವ್ರ ಸುಟ್ಟ ಗಾಯಗಳಾಗಿವೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದ ಸಮೀಪವೇ ವಿದ್ಯುತ್ ಲೈನ್ ಹಾದು ಹೋಗಿರುವುದು ಇಲ್ಲಿನ ಮಕ್ಕಳಿಗೆ ತಿಳಿದಿದೆ. ಚೆಂಡನ್ನು ಪಡೆಯುವಾಗ ಬಾಲಕನಿಗೆ ಆಕಸ್ಮಿಕವಾಗಿ 11ಕೆವಿ ತಂತಿ ಸ್ಪರ್ಶಿಸಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.