Webdunia - Bharat's app for daily news and videos

Install App

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

Sampriya
ಸೋಮವಾರ, 28 ಜುಲೈ 2025 (19:37 IST)
Photo Credit X
ಮಂಗಳೂರು: ನಾಗರ ಪಂಚಮಿ, ನಾಗದೇವತೆಗಳನ್ನು ಪೂಜಿಸಲು ಮೀಸಲಾಗಿರುವ ವಿಶೇಷವಾದ ದಿನವಾಗಿದೆ. ಇದು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು (ಐದನೇ ದಿನ) ಆಚರಿಸಲಾಗುತ್ತದೆ.

ಜುಲೈ 29ರಂದು ನಾಳೆ ದೇಶದಾದ್ಯಂತ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಗರಾಧನೆಗೂ ಕರಾವಳಿ ಪ್ರದೇಶಕ್ಕೂ ವಿಶೇಷವಾದ ನಂಟಿರುವುದರಿಂದ ಇಲ್ಲಿನ ಪವಿತ್ರ ಕ್ಷೇತ್ರಗಳಲ್ಲಿ ನಾಳೆ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿಯನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬ ಹಿಂದೂ ಕೂಡಾ ಈ ಹಬ್ಬವನ್ನು ಆಚರಿಸುತ್ತಾರೆ. ಇನ್ನೂ ಜಾತಕದಲ್ಲಿ ನಾಗ ದೋಷ ಹೆಚ್ಚಿರುವವರು ಈ ದಿನದಂದು ವಿಶೇಷ ಆರಾಧನೆ ಮಾಡುವ ಮೂಲಕ, ತನ್ನ ಬದುಕಿನಲ್ಲಿ ಬರುವ ನಾಗದೋಷವನ್ನು ದೂರ ಮಾಡಬಹುದೆಂಬ ನಂಬಿಕೆಯೂ ಇದೆ. 

ಭಾರತದ ಅತ್ಯಂತ ಪವಿತ್ರ ನಾಗಾರಾಧನೆ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ ಸಹಿತ ಕರಾವಳಿಯ ಪ್ರತೀ ನಾಗಾರಾಧನೆ ಕ್ಷೇತ್ರದಲ್ಲೂ ನಾಳೆ ವಿಶೇಷವಾದ ಪೂಜೆಯನ್ನು ನೆರವೇರಿಸಲಾಗುತ್ತದೆ. 

ಕರಾವಳಿಯ ಪ್ರಸಿದ್ಧ ನಾಗಾರಾಧನೆ ಕ್ಷೇತ್ರ ಹಾಗೂ ದೇವಸ್ಥಾನಗಳಲ್ಲಿ ತಂಬಿಲ ಸೇವೆಗಳನ್ನು ನಡೆಸಲಾಗುತ್ತೆ. ಅದಲ್ಲದೆ ವ್ಯಕ್ತಿಯ ಮೂಲ ಮನೆಯ ನಾಗನ ಬನದಲ್ಲೂ ನಾಳೆ ನಾಗತಂಬಿಲ ನೆರವೇರುತ್ತದೆ. ಅಲ್ಲಿ ತಂಬಿಲ ಸೇವೆಯನ್ನು ಮಾಡುವುದರಿಂದ ನಾಗ ದೋಷ ದೂರವಾಗುತ್ತದೆ ಎನ್ನುತ್ತಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಬಿಜೆಪಿ ರಾಜಾಧ್ಯಕ್ಷ ನೇಮಕ ವಿಳಂಬದ ಹಿಂದಿನ ಕಾರಣ ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್

ಶೋಷಿತರನ್ನು ಮತಬ್ಯಾಂಕ್ ಮಾಡಿ ವಂಚಿಸುತ್ತ ಬಂದ ಕಾಂಗ್ರೆಸ್ ಪಕ್ಷ: ವಿಜಯೇಂದ್ರ

ಮುಂದಿನ ಸುದ್ದಿ
Show comments