Select Your Language

Notifications

webdunia
webdunia
webdunia
webdunia

ಇಂದು 71ನೇ ಗಣರಾಜ್ಯೋತ್ಸವದ ಹಿನ್ನಲೆ; ಮಾಣಿಕ್ಯ ಷಾ ಪರೇಡ್ ಮೈದಾನಕ್ಕೆ ಬರುವವರು ತರುವಂತಿಲ್ಲ ಈ ವಸ್ತು

ಇಂದು 71ನೇ ಗಣರಾಜ್ಯೋತ್ಸವದ ಹಿನ್ನಲೆ; ಮಾಣಿಕ್ಯ ಷಾ ಪರೇಡ್ ಮೈದಾನಕ್ಕೆ ಬರುವವರು ತರುವಂತಿಲ್ಲ ಈ ವಸ್ತು
ಬೆಂಗಳೂರು , ಭಾನುವಾರ, 26 ಜನವರಿ 2020 (09:01 IST)
ಬೆಂಗಳೂರು : ಇಂದು 71ನೇ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ  ಬೆಂಗಳೂರಿನ ಮಾಣಿಕ್ಯ ಷಾ ಪರೇಡ್  ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.


ಈ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 9 ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಗೆ ವ್ಯವಸ್ಥೆ ಮಾಡಲಾಗಿದೆ. 10 ಕೆಎಸ್ ಆರ್ ಪಿ ತುಕಡಿ, ಕ್ಷಿಪ್ರ ಪಡೆ, ಗರುಡ ಪಡೆ, ಕಮಾಂಡ್ ಕಂಟ್ರೋಲ್ ವಾಹನ ನಿಯೋಜನೆ ಮಾಡಲಾಗಿದೆ. ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಮಾಣಿಕ್ಯ ಷಾ ಪರೇಡ್  ಮೈದಾನದ ಸುತ್ತ 85 ಸಿಸಿ ಕ್ಯಾಮರಾ ಅಳವಡಿಸಲಾಗಿದೆ.


ಹಾಗೇ ಕಾರ್ಯಕ್ರಮ ವೀಕ್ಷಿಸಲು ಮೈದಾನಕ್ಕೆ ಬರುವವರಿಗೆ ಬೆಳಿಗ್ಗೆ 8 ಗಂಟೆಯೊಳಗೆ ಮೈದಾನಕ್ಕೆ ಬರುವಂತೆ ಸೂಚಿಸಲಾಗಿದೆ. ಅಲ್ಲದೇ ಮೈದಾನಕ್ಕೆ ಬರುವವರು ಮೊಬೈಲ್, ಹೆಲ್ಮೆಟ್, ಛತ್ರಿ, ಕ್ಯಾಮರಾ, ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರಗಳು, ಹರಿತವಾದ ವಸ್ತು, ಕಪ್ಪು ಕರವಸ್ತ್ರ, ಬಣ್ಣದ ದ್ರಾವಣ, ನೀರಿನ ಬಾಟಲ್, ತಿಂಡಿ ತಿನಿಸು, ಬಾವುಟಗಳು, ಪಟಾಕಿ, ಸ್ಫೋಟಕ ವಸ್ತುಗಳನ್ನು ತರದಂತೆ ನಿರ್ಬಂಧ ಹೇರಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು 71ನೇ ಗಣರಾಜ್ಯೋತ್ಸವದ ಹಿನ್ನಲೆ; ದೆಹಲಿಯ ಸುತ್ತಮುತ್ತ ಬಿಗಿ ಭದ್ರತೆ