Select Your Language

Notifications

webdunia
webdunia
webdunia
webdunia

ಹಿರಿತನಕ್ಕೆ ಬೆಲೆ ಇಲ್ಲದ ಪಕ್ಷಕ್ಕೆ ಭವಿಷ್ಯ ಇರುವುದಿಲ್ಲ: ಎಸ್.ಎಂ.ಕೃಷ್ಣ

ಹಿರಿತನಕ್ಕೆ ಬೆಲೆ ಇಲ್ಲದ ಪಕ್ಷಕ್ಕೆ ಭವಿಷ್ಯ ಇರುವುದಿಲ್ಲ: ಎಸ್.ಎಂ.ಕೃಷ್ಣ
ಬೆಂಗಳೂರು , ಭಾನುವಾರ, 29 ಜನವರಿ 2017 (13:20 IST)
'ಹಿರಿತನಕ್ಕೆ ಬೆಲೆ ಇಲ್ಲದ ಪಕ್ಷಕ್ಕೆ ಭವಿಷ್ಯ ಇರುವುದಿಲ್ಲ'. ಇಂದು ನಾನು ಅತ್ಯಂತ ನೋವಿನಿಂದ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬೇಸರ ವ್ಯಕ್ತಪಡಿಸಿದರು.
 
ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ರಾಜೀನಾಮೆ ಕುರಿತು ಪುನರ್‌ಪರಿಶೀಲಿಸುವಂತೆ ಹಲವರು ಮನವಿ ಮಾಡಿಕೊಂಡರು. ಈ ಕುರಿತು ದೆಹಲಿಯಿಂದಲೂ ಸಹ ಕರೆ ಬಂದಿತ್ತು. ಅವರೆಲ್ಲರಿಗೂ ಋಣಿಯಾಗಿರುತ್ತೇನೆ ಎಂದರು.
 
ನಾನು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಆದರೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ನಿವೃತ್ತಿ ಎನ್ನುವುದು ನನ್ನ ಪದಕೋಶದಲೇ ಇಲ್ಲ ಎಂದು ತಿಳಿಸಿದರು.
 
ಇಂದು ನಾನು ಕಾಂಗ್ರೆಸ್ ಪಕ್ಷ ತೈಜಿಸುತ್ತಿದ್ದೇನೆ. ರಾಜೀನಾಮೆ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನನಗೆ ಸಾಕಷ್ಟು ಗೌರವ ನೀಡಿದ್ದಾರೆ. ಅದರಂತೆ ನಾನು ಸಹ ಅವರನ್ನು ಗೌರವಿಸಿದ್ದೇನೆ. ಆದಷ್ಟು ಬೇಗ ಅವರ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಬೇಡಿಕೊಂಡರು.
 
ಸತತ 46 ವರ್ಷಗಳ ಕಾಲ ನಮ್ಮ ಮನೆಯಂತಿದ್ದ ಕಾಂಗ್ರೆಸ್ ಪಕ್ಷವನ್ನು ಇಂದು ತೊರೆಯಬೇಕಾದ ಸ್ಥಿತಿ ಬಂದಿದೆ. ಇದು ಅತ್ಯಂತ ನೋವಿನ ಸಂದರ್ಭ. ರಾಜ್ಯ ಸರಕಾರದ ಕುರಿತು ಮಾತನಾಡುವುದಿಲ್ಲ. ಮುಂದಿನ ನಿರ್ಧಾರ ನೋಡಿಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದರು. 

ಬಿಜೆಪಿ ಸೇರ್ಪಡೆ?
 
ಕಾಂಗ್ರೆಸ್ ತೈಜಿಸಿ ಬಿಜೆಪಿ ಪಕ್ಷ ಸೇರುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಗುತ್ತಲೇ ಬಾಣ ಬಿಟ್ಟ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಇದೇನು ಅಸೆಬ್ಲಿಯಾ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋ ಕಳ್ಳರಿಗೆ ಮರಣದಂಡನೆ ಶಿಕ್ಷೆಯಾಗಬೇಕು: ಸುಬ್ರಮಣಿಯನ್ ಸ್ವಾಮಿ