ಗೋ ಕಳ್ಳರಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಮಂಗಳೂರಿನ ಕೂಳೂರಿನಲ್ಲಿ ನಡೆದ ಗೋಯಾತ್ರೆ ಮಹಾಮಂಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಗೋ ರಕ್ಷಣೆಗಾಗಿ ಸಂಸತ್‌ನಲ್ಲಿ ಕಾನೂನು ರೂಪಿಸುವ ಅವಶ್ಯಕತೆ ಇದೆ. ಗೋ ರಕ್ಷಣೆ ಹಾಗೂ ಗೋ ಸಂಸ್ಕೃತಿ ಪುನರುತ್ಥಾನದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಯ್ಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮುಸ್ಲಿಂ ದೊರೆ ಬಹದ್ಧೂರ ಶಾ ಜಫರ್ ಅವರು ಗೋ ಕಳ್ಳರಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದ್ದರು. ಗೋ ಮೂತ್ರ ಆರೋಗ್ಯಕರ. ಗೋವಿನ ಪ್ರತಿಯೊಂದು ಅಂಶವೂ ಉಪಯೋಗಕಾರಿಯಾಗಿದೆ. ಹೀಗಾಗಿ ಗೋ ರಕ್ಷಣೆ ಅಗತ್ಯ ಎಂದರು.
ಮಂಗಳೂರಿನ ಕೂಳೂರಿನಲ್ಲಿ ನಡೆದ ಗೋ ಮಹಾಮಂಗಳ ಸಮಾವೇಶದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿರುವ 1200 ಸಂತರು ಭಾಗಿಯಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ