Select Your Language

Notifications

webdunia
webdunia
webdunia
webdunia

ಪ್ರಿಯಕರ ವಂಚನೆಗೆ ಬೇಸತ್ತು ಮಾಡೆಲ್ ಸೂಸೈಡ್.!

Tired of being cheated by her lover
bangalore , ಶುಕ್ರವಾರ, 28 ಜುಲೈ 2023 (14:00 IST)
ಫ್ಯೂಚರ್ ನಲ್ಲಿ  ದೊಡ್ಡ ಮಾಡಲ್ ಆಗೋ ಎಲ್ಲಾ ಅವಕಾಶಗಳೂ ಇದ್ವು.. ಆದ್ರೆ ಪ್ರೀತಿ ಹೆಸರಲ್ಲಿ ಮೋಡಿ‌ ಮಾಡಿ‌ದ ವಂಚಕನ ಬಲೆಗೆ ಬಿದ್ದು ಹೆಣವಾಗಿ ಹೋಗಿದ್ದಾಳೆ. ಈ ಫೋಟೋದಲ್ಲಿ ಮುದ್ದು ಮುದ್ದಾಗಿ ಕಾಣ್ತಿರೋ   ಈ ಯುವತಿ ಹೆಸರು  ವಿದ್ಯಾ ಶ್ರೀ.. ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರದಲ್ಲಿ ವಾಸ ಮಾಡ್ತಿದ್ದ ಈಕೆ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಎಂ‌ಸಿಎ ಮಾಡಿಕೊಂಡಿದ್ದ ವಿದ್ಯಾಶ್ರೀ ಐಟಿ ಕಂಪನಿಯೊಂದರಲ್ಲಿ  ಕೆಲಸ ಮಾಡ್ತಿದ್ಲು. ಸೌಂದರ್ಯ ‌ವಂತೆಯಾದ ವಿದ್ಯಾ ಶ್ರೀ  ಮಾಡಲಿಂಗ್ ನಲ್ಲೂ ಆಸಕ್ತಿ ಇಟ್ಕೊಂಡಿದ್ಲು. ಕೆಲವು ಕಾಂಪಿಟೇಷನಲ್ಲೂ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ಲಂತೆ. ಮಾಡೆಲಿಂಗ್ ನಲ್ಲಿ  ಆಸ್ಕಿ ಇದಿದ್ರಿಂದ  ಫೇಸ್ ಬುಕು  , ಇನ್ಸ್ಟಾಗ್ರಾಂ ಗಳಲ್ಲಿ ರೀಲ್ಸ್ ಟಿಕ್ಟಾಕ್ ಮಾಡಿ ಹಾಕ್ತಿದ್ಲು. ಅದೇ ಸಾಮಾಜಿಕ ಜಾಲತಾಣದಲ್ಲಿ ಪೋಟೋದಲ್ಲಿ ಕಾಣೋ ಅಕ್ಷಯ್ ಅನ್ನೋ ಐನಾತಿ ಪರಿಚಯ ಆಗಿದ್ದ.ಕಳೆದ ಒಂದು ವರ್ಷದಿಂದ ವಿದ್ಯಾಶ್ರೀಯನ್ನ  ಪ್ರೀತಿ ಮಾಡಿದ್ದಾನೆ,  ಮದುವೆ ಆಗೋದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪೀಕಿದ್ದಾನೆ.ಇತ್ತ ಸಾಲದಕ್ಕೆ‌ಇನ್ನೊಂದಷ್ಟು ಹುಡುಗಿಯರ ಹಿಂದೆ‌ಸುತ್ತಾಡ್ತಿದ್ನಂತೆ ಇನ್ನೂ ವಿದ್ಯಾಶ್ರೀ ಕೊಟ್ಟ ಹಣ ವಾಪಸ್ ಕೇಳಿದ್ರೆ ಕೆಟ್ಟ ಕೆಟ್ಟದಾಗಿ ಬೈಯ್ದಿದ್ದಾನೆ. ಇದರಿಂದ ಖಿನ್ನತೆಗೊಳಗಾದ ವಿದ್ಯ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನನ್ನ ಸಾವಿಗೆ ಅಕ್ಷಯ್ ಕಾರಣ ಅವನು ನನ್ನ ನಾಯಿ ಥರ ಟ್ರೀಟ್ ಮಾಡ್ತಾ ಇದ್ದಾನೆ. ನನಗೆ ಕೊಡಬೇಕಾದ 1 ಲಕ್ಷದ 76 ಸಾವಿರ ದುಡ್ಡು ಕೇಳಿದ್ರೆ ನನಗೆ ನನ್ನ ಪ್ಯಾಮಿಲಿಗೆ ಕೆಟ್ಟ ಕೆಟ್ಟ ಮಾತಲ್ಲಿ ಬೈದು ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ನನ್ನ ಡಿಪ್ರೆಷನ್ಗೆ ಅಡಿಕ್ಟ್ ಮಾಡಿದ್ದಾನೆ.ಹೀಗಾಗಿ ನನಗೆ ಬದುಕಲು ಆಗುತ್ತಿಲ್ಲ. ಡೇ ಬೈ ಡೇ ನನಗೆ ತುಂಬಾ ಸ್ಟ್ರೈನ್ ಆಗುತ್ತಿದೆ. ಅಮ್ಮ ಗುರು ಮನು I am Sorry ದಯವಿಟ್ಟು ನನ್ನ ಕ್ಷಮಿಸಿ. ಎಲ್ಲಾ ಹುಡುಗಿಯಲ್ಲಿ ವಿನಂತಿ ದಯವಿಟ್ಟು ಯಾರು ಲವ್ ಮಾಡಬೇಡಿ.
Good bye this World ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ಮತ್ತಷ್ಟು ಸಂಚರಿಸಲಿವೆ ಇವಿ ಬಸ್