Publish Date: Thu, 16 Mar 2023 (18:13 IST)
Updated Date: Thu, 16 Mar 2023 (18:14 IST)
ಮಂಡ್ಯ : ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ, ಆತ ಬ್ರಿಟಿಷರ ಬಳಿ ಪಿಂಚಣಿ ತೆಗೆದುಕೊಳ್ಳುತ್ತಿದ್ದ ಎಂದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಬಿಜೆಪಿಯು ಟಿಪ್ಪು ಮಕ್ಕಳ ಪಿಂಚಣಿ ಅಸ್ತ್ರ ಹೂಡಿದೆ.
ಇಷ್ಟು ದಿನಗಳ ಕಾಲ ಟಿಪ್ಪು ವಿರೋಧಿಸುವ ಮೂಲಕ ಬಿಜೆಪಿ ಹಿಂದೂಗಳ ಮತಗಳನ್ನು ಉರಿಗೌಡ, ನಂಜೇಗೌಡರ ಟ್ಯಾಕಲ್ ಮಾಡಲು ಮುಂದಾಗಿತ್ತು. ಟಿಪ್ಪು ಒಬ್ಬ ದೇಶ ಪ್ರೇಮಿ ಎಂದು ಹೊಗಳುತ್ತಿದ್ದ ಕಾಂಗ್ರೆಸ್ಗೆ ಟಿಪ್ಪು ಹಾಗೂ ಆತನ ಮಕ್ಕಳು ದೇಶ ಪ್ರೇಮಿ ಅಲ್ಲ ಎಂದು ನಿರೂಪಿಸಲು ಬಿಜೆಪಿ ಮುಂದಾಗಿದೆ.
ಟಿಪ್ಪು ಮರಣದ ನಂತರ ಆತನ ಕುಟುಂಬಸ್ಥರನ್ನು ಗಡಿಪಾರು ಮಾಡಲಾಗುತ್ತದೆ. ಬಳಿಕ ಅವರು ಕೋಲ್ಕತ್ತಾಗೆ ಹೋಗುತ್ತಾರೆ. ಈ ವೇಳೆ ಟಿಪ್ಪುವಿನ 12 ಮಕ್ಕಳ ಪೈಕಿ ಗುಲಾಮ್ ಮಹಮದ್ ಬ್ರಿಟನ್ನಿನ ರಾಜವಂಶಸ್ಥರ ಬಳಿ ಹೋಗುತ್ತಾನೆ. 6 ತಿಂಗಳ ಕಾಲ ಅಲ್ಲಿಯೇ ಇದ್ದು, ಕುಟುಂಬ ನಿರ್ವಹಣೆಗೆ ವಾರ್ಷಿಕ ಪಿಂಚಣಿಯನ್ನು ಪಡೆದಿದ್ದಾನೆ.
.