ಸಿಎಂ ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿತಿದೆ: ಕೆ.ಎಸ್.ಈಶ್ವರಪ್ಪ

Webdunia
ಶನಿವಾರ, 11 ನವೆಂಬರ್ 2017 (14:31 IST)
ಸಿಎಂ ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ಸುಲ್ತಾನ್ ರಕ್ತ ಹರಿತಿದೆ. ನನ್ನ ಮೈಯಲ್ಲಿ ಕನಕದಾಸರ ರಕ್ತ ಹರಿತಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ಹೆಸರು ಬದಲಿಸಿ ಟಿಪ್ಪು ಎಂದು ಕರೆದುಕೊಳ್ಳಲಿ. ರಾಜ್ಯದಲ್ಲಿ ರಾಷ್ಟ್ರಭಕ್ತರ ಹತ್ಯೆಗಳಾಗುತ್ತಿವೆ. ಪೊಲೀಸರನ್ನು ಇಟ್ಟುಕೊಂಡು ಆಟವಾಡ್ತೀರಾ ಸಿದ್ದರಾಮಯ್ಯನವರೇ? ಕುಲ ಕುಲಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ವಾಕ್ ಪ್ರಹಾರ್ ನಡೆಸಿದರು
 
ರಾಷ್ಟ್ರಭಕ್ತರನ್ನು ಹಣಿಯಲು ಇಂದಿರಾಗಾಂಧಿಯವರಿಂದಲೇ ಸಾಧ್ಯವಾಗಲಿಲ್ಲ. ಇನ್ನು ನಿಮ್ಮಿಂದ ಸಾಧ್ಯವೇ? ಮುಸ್ಲಿಮರು ಹಿಂದುಗಳನ್ನು ಹತ್ಯೆ ಮಾಡುವಾಗ ನಿಮ್ಮ ರಕ್ತ ಕುದಿಯಲಿಲ್ಲವೇ? ನಿಮ್ಮ ಸಚಿವ ರೈ ಘಟೋದ್ಘಜ ಮುಸ್ಲಿಂವಾದಿ ಎಂದು ತಿರುಗೇಟು ನೀಡಿದರು.
 
ಸಿಎಂ ಸಿದ್ದರಾಮಯ್ಯಗೆ ಹೆಣ್ಣುಮಕ್ಕಳಿಲ್ಲ. ಆದ್ದರಿಂದ, ಹೆಣ್ಣುಮಕ್ಕಳು ಎದುರಿಸುವ ಸಂಕಷ್ಟಗಳು ಅವರಿಗೆ ಅರ್ಥವಾಗುವುದಿಲ್ಲ ಎಂದು ಕಿಡಿಕಾರಿದ್ಗಾರೆ.
 
ಸಿಎಂ ಸಂಪುಟದ ಸಚಿವರೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅವಾಜ್ ಹಾಕಿ ಕಲ್ಲಡ್ಕ ಪ್ರಭಾಕರ್‌ರನ್ನು ಬಂಧಿಸುವಂತೆ ಒತ್ತಡ ಹೇರ್ತಾರೆ. ಅವರ ಒಂದು ರೋಮ ಮುಟ್ಟಿದರೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಅಧಿಕಾರ ಹಂಚಿಕೆ ಬಗ್ಗೆ ಕೊನೆಗೂ ಮಹತ್ವದ ಅಪ್ ಡೇಟ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

20 ರೂ ಇದ್ದ ಟೊಮೆಟೊ ದರ ದಿಡೀರ್ ಏರಿಕೆ: ಎಷ್ಟಾಗಿದೆ ನೋಡಿ

ಅಯೋಧ್ಯೆ ಕೇಸರಿ ಧ್ವಜದಿಂದ ಮುಸ್ಲಿಮರಿಗೆ ಅನ್ಯಾಯ ಎಂದ ಪಾಕ್: ನಿಮ್ದು ಎಷ್ಟಿದೆಯೋ ನೋಡ್ಕೊಳ್ಳಿ ಎಂದ ಭಾರತ

ಮುಂದಿನ ಸುದ್ದಿ
Show comments