Select Your Language

Notifications

webdunia
webdunia
webdunia
webdunia

ಯೋಗ್ಯತೆ ಬಗ್ಗೆ ಪ್ರಶ್ನಿಸಿದ ನಿಖಿಲ್ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಚೇತನ್‌

chetan
ಬೆಂಗಳೂರು: ಅಣ್ಣಾವ್ರ ಬಗ್ಗೆ ಮಾತನಾಡಲು ಚೇತನ್‌ಗೆ ಯೋಗ್ಯತೆಯಿಲ್ಲ ಎಂದ ನಟ ಚೇತನ್‌ ಹೇಳಿಕೆಗೆ  ಜೆಡಿಎಸ್‌ಗೆ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರ ಆಕ್ರೋಶ ಹೊರಹಾಕಿದ್ದಾರೆ. 

ಸ್ಮಾರಕದ ಜಾಗದ ವಿಚಾರವಾಗಿ ಚೇತನ್ ಅವರು ಎತ್ತಿದ್ದ ಆಕ್ಷೇಪಕ್ಕೆ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ನಿಖಿಲ್‌, ‘ಅಣ್ಣಾವ್ರ ಬಗ್ಗೆ ಮಾತನಾಡಲು ಚೇತನ್‌ಗೆ ಯೋಗ್ಯತೆಯಿಲ್ಲ ಎಂದರು.

ಈ ಕುರಿತು ಫೇಸ್‌ಬುಕ್‌ನಲ್ಲಿ ತಿರುಗೇಟು ನೀಡಿರುವ ಚೇತನ್‌, ‘ಪ್ರಜಾಪ್ರಭುತ್ವದಲ್ಲಿ ನಾವೆಲ್ಲರೂ ಮಾತನಾಡಲು ಯೋಗ್ಯರೇ. ಆದರೆ, ಯಾರ ಮಾತಿಗೆ ನಿಜವಾದ ತೂಕ ಇದೆ ಅನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ ಎಂದು ಕೌಂಟರ್ ನೀಡಿದ್ದಾರೆ. 

ಚೇತನ್ ಪೋಸ್ಟ್‌ನಲ್ಲಿ ಹೀಗಿದೆ: 

ಪ್ರಜಾಪ್ರಭುತ್ವದಲ್ಲಿ ಯಾರು ಮಾತನಾಡಲು ‘ಯೋಗ್ಯ’?. ಮಾಜಿ ಪ್ರಧಾನಿಯ ಮಗ, 2006ರಲ್ಲಿ ಅವಕಾಶವಾದಿ ‘ಸ್ಮಾರಕ ಪಾಲಿಟಿಕ್ಸ್’ ಶುರು ಮಾಡಿ ಕನ್ನಡ ಚಲನಚಿತ್ರರಂಗದ ಅಭಿಮಾನಿಗಳ ನಡುವೆ ಅದಕ್ಕೆ ಸಂಬಂಧಪಟ್ಟ ‘ಫ್ಯಾನ್ ವಾರ್ಸ್’ ಪ್ರೇರೇಪಿಸಿದವರಾ? ಅಥವಾ ಅವರ ಮಗ, ಮೂರು ಬಾರಿ ಸೋತವರು, ಸ್ವಜನಪಕ್ಷಪಾತ ಹೊರತುಪಡಿಸಿ ಮತ್ತೇನು ಸಾಧನೆ ಇಲ್ಲದವರಾ?’ ಎಂದು ಟೀಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ