Publish Date: Thu, 03 Jan 2019 (17:51 IST)
Updated Date: Thu, 03 Jan 2019 (17:53 IST)
ಮೂರು ರಾಜ್ಯಗಳ ಸಾವಿರಾರು ವಾಹನಗಳು ಇಂದು ನಿಂತಲ್ಲೇ ನಿಂತಿವೆ. ಸಂಚಾರ ಸ್ಥಗಿತದಿಂದಾಗಿ ಲಕ್ಷಾಂತರ ಜನರು ಹೈರಾಣಾದರು.
ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಕೇರಳ ಬಂದ್ ಗೆ ಕರೆ ನೀಡಲಾಗಿದ್ದು, ಸಾವಿರಾರು ವಾಹನಗಳ ಸಂಚಾರ ಸ್ಥಗಿತಗೊಂಡಿವೆ.
ರಾಜ್ಯದ ಗಡಿ ಚಾಮರಾಜನಗರ ಜಿಲ್ಲೆಯನ್ನು ದಾಟದ ವಾಹನಗಳಿಂದಾಗಿ ಸಾರಿಗೆ ಅಸ್ತ ವ್ಯಸ್ತಗೊಂಡಿದೆ.
ಇತ್ತ ಕೇರಳ, ಅತ್ತ ತಮಿಳುನಾಡು ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಕರ್ನಾಟಕದ ಗಡಿಯಲ್ಲಿ ವಾಹನಗಳು ಕಿಲೋಮೀಟರ್ ದೂರದವರೆಗೆ ನಿಂತಿವೆ.
ಗುಂಡ್ಲುಪೇಟೆಯ ವಿವಿಧ ಚೆಕ್ ಪೋಸ್ಟ್ ಗಳ ಬಳಿ ಸಾಲುಗಟ್ಟಿ ನಿಂತಿರುವ ವಾಹನಗಳ ಚಾಲಕರು, ಪ್ರಯಾಣಿಕರು ಪರದಾಡುವಂತಾಗಿದೆ.
ಕೇರಳದ ಗಡಿ ಸುಲ್ತಾನ್ ಬತ್ತೇರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇನ್ನು ಗುಂಡ್ಲುಪೇಟೆ ತಾಲ್ಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ದಾಟದ ಎರಡು ರಾಜ್ಯದ ವಾಹನಗಳಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಬ್ದಗೊಂಡಿದೆ.