ಬಾದಾಮಿ: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವು

Webdunia
ಭಾನುವಾರ, 22 ಆಗಸ್ಟ್ 2021 (17:06 IST)
ಕಾಲು ಜಾರಿ ನದಿಗೆ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರ ಬಳಿ ಸಂಭವಿಸಿದೆ.

ಮಲ್ಲಪ್ರಭಾ ನದಿಯಲ್ಲಿ ಪತಿ ವಿಶ್ವನಾಥ (40), ಪತ್ನಿ ಶ್ರೀದೇವಿ (32) ಮತ್ತು ಮಗಳು ನಂದಿನಿ (12) ಮೃತ ರ್ದುದೈವಿಗಳು.
ಕಾಲು ಜಾರಿ ಒಬ್ಬರನ್ನೊಬ್ಬರು ರಕ್ಷಣೆ ಮಾಡೋ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಮೃತರು ಗುಳೇದಗುಡ್ಡ ತಾಲೂಕಿನ ಕೋಟೆಕಲ್ಲ್ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಶ್ರೀದೇವಿ ಶವ ಮಾತ್ರ ಪತ್ತೆಯಾಗಿದ್ದು, ಪತಿ ವಿಶ್ವನಾಥ ಮತ್ತು ಮಗಳು ನಂದಿನಿ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಶೋಧ ಕಾರ್ಯ ನಡೆಸಿದೆ.
ಹುಣ್ಣಿಮೆ ಹಾಗೂ ರಕ್ಷಾ ಬಂಧನ‌ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರವಾಗಿರುವ ಶಿವಯೋಗಿ ಮಂದಿರಕ್ಕೆ ಆಗಮಿಸಿದ್ದ ಕುಟುಂಬ ಉಪಹಾರ ಸೇವಿಸುವ ಮುನ್ನ ನೀರಿಗೆ ಇಳಿದಾಗ ಕಾಲು ಜಾರಿ ಬಿದ್ದಿದ್ದಾರೆ. ಒಬ್ಬರಿಗೆ ಮತ್ತೊಬ್ಬರು ರಕ್ಷಣೆ ಮಾಡುವ ಭರದಲ್ಲಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಸರಿ ಧ್ವಜ ಹಿಡಿದು ಮೆರವಣಿಗೆಗೆ ಚಾಲನೆ: ಕಾಂಗ್ರೆಸ್‌ ನಾಯಕರ ಕೆಂಗಣ್ಣಿಗೆ ಗುರಿಯಾದ ಉಡುಪಿ ಜಿಲ್ಲಾಧಿಕಾರಿ

ಮಂತ್ಲಿ ಮನಿ ಬಹಿರಂಗ ಆದಾಗಲೇ ಅಬಕಾರಿ ಸಚಿವರನ್ನ ವಜಾ ಮಾಡಬೇಕಿತ್ತು: ಸಿ.ಟಿ. ರವಿ ವಾಗ್ದಾಳಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ರೀಲ್ಸ್ ಗಾಗಿ ಇದೆಂಥಾ ಶೋಕಿ: ಟ್ರಕ್ ನಡಿಯಲ್ಲಿ ಬೈಕ್ ಚಾಲನೆ ಭಯಾನಕ ವಿಡಿಯೋ

ಮುಂದಿನ ಸುದ್ದಿ
Show comments