Publish Date: Mon, 15 Nov 2021 (10:43 IST)
Updated Date: Mon, 15 Nov 2021 (08:26 IST)
ದಾವಣಗೆರೆ: ಜಗಳೂರು ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.
ಸೈಯರ್ (10), ಅಶ್ರಫ್ (7), ಆಸೀಫ್ (5) ಮೃತಪಟ್ಟ ದುರ್ದೈವಿಗಳು. ನವಂಬರ್ 13 ರಂದು ಘಟನೆ ನಡೆದಿದ್ದು, ಮಕ್ಕಳನ್ನು ರಕ್ಷಿಸಲು ಪ್ರಯತ್ನಪಟ್ಟರೂ ಸಾಧ‍್ಯವಾಗಲಿಲ್ಲ.
ಮೃತರ ಕುಟುಂಬಸ್ಥರಿಗೆ ಸ್ಥಳೀಯ ಶಾಸಕರು ತಲಾ 50 ಸಾವಿರ ರೂ. ಪರಿಹಾರ ಧನ ನೀಡಿದ್ದಾರೆ. ಜಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.