Select Your Language

Notifications

webdunia
webdunia
webdunia
webdunia

ವಿದೇಶಕ್ಕೆ ಹ್ಯಾಶಿಶ್ ಆಯಿಲ್ ರಫ್ತು ಮಾಡುತ್ತಿದ್ದ ಮೂವರನ್ನು ಎನ್ ಸಿ ಬಿ ಅಧಿಕಾರಿಗಳು ಬಂಧನ

Three arrested for exporting hashish oil abroad
bangalore , ಸೋಮವಾರ, 4 ಅಕ್ಟೋಬರ್ 2021 (21:01 IST)
ಬೆಂಗಳೂರು: ವಿದೇಶಕ್ಕೆ ಹ್ಯಾಶಿಶ್ ಆಯಿಲ್ ರಫ್ತು ಮಾಡುತ್ತಿದ್ದ ಮೂವರನ್ನು ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೆ ಬಹ್ರೇನ್‌ಗೆ ಕಳಿಸುತ್ತಿದ್ದ 3.5 ಕೆ.ಜಿ ಹ್ಯಾಶಿಶ್ ಆಯಿಲ್ ವಶಕ್ಕೆ ಪಡೆಯಲಾಗಿದೆ.
ಎರ್ನಾಕುಲಂ ಏರ್ ಕೆರಿಯರ್ ನಲ್ಲಿ ಹ್ಯಾಶಿಶ್ ಪತ್ತೆಯಾಗಿತ್ತು. ಬಳಿಕ ಕೊರಿಯರ್ ಕಳುಹಿಸುತ್ತಿದ್ದ ವ್ಯಕ್ತಿಯನ್ನು ಎನ್ ಸಿ ಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಇನ್ನು ಬಂಧಿತ ವ್ಯಕ್ತಿ ಈ ಹಿಂದೆ ಬಹ್ರೇನ್‌ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಕೆಲಸ ಬಿಟ್ಟು ಬೆಂಗಳೂರಿನಲ್ಲಿ ನೆಲಸಿದ್ದ. ಈ ದಂಧೆಯಲ್ಲಿ ತೊಡಗಿಕೊಂಡಿದ್ದ ಎಂಬುವುದು ತಿಳಿದು ಬಂದಿದೆ.
ಬಂಧಿತ ವ್ಯಕ್ತಿ ಮಾಹಿತಿ ಮೇರೆಗೆ ಮತ್ತೋರ್ವನ ಬಂಧನವಾಗಿದೆ. ಕೊಚ್ಚಿ ಎನ್ ಸಿ ಬಿಯಿಂದ ಕಾಸರಗೋಡಿನಲ್ಲಿದ್ದ ವ್ಯಕ್ತಿಯ ಬಂಧನವಾಗಿದೆ.
ಈ ರೀತಿ ವಿದೇಶಕ್ಕೆ ಹ್ಯಾಶಿಶ್ ಆಯಿಲ್ ರಫ್ತು ಮಾಡುತ್ತಿದ್ದ ಮೂವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೌಚಗುಂಡಿ ಸ್ವಚ್ಛಗೊಳಿಸುವ ಕಾರ್ಮಿಕರ ಸಮಗ್ರ ಸಮೀಕ್ಷೆ- ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ