Select Your Language

Notifications

webdunia
webdunia
webdunia
webdunia

ಯಾರು ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ಆಗಬೇಕು,ನಾವು ಮಾಡಿದ್ರೆ ನಮ್ಮಗೂ ಶಿಕ್ಷೆ ಆಗಲಿ- ಡಿಕೆಶಿ

ಯಾರು ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ಆಗಬೇಕು,ನಾವು ಮಾಡಿದ್ರೆ ನಮ್ಮಗೂ ಶಿಕ್ಷೆ ಆಗಲಿ- ಡಿಕೆಶಿ
bangalore , ಸೋಮವಾರ, 21 ನವೆಂಬರ್ 2022 (13:48 IST)
ವೋಟರ್ ಐಡಿ ಹಗರಣದ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.ನಾವು ನಾಳೆಗೆ ಟೈಮ್  ಕೇಳಿದ್ದೇವೆ.ನಮಗೆ‌ ಚಿಫ್ ಎಲೆಕ್ಷನ್ ಕಮಿಷನರೇ ಬೇಕು.ನಮ್ಮ  ಹತ್ರಾ ಅನೇಕ ಮಾಹಿತಿ ಇದಾವೆ.ಪೊಲೀಸ್ ಅಧಿಕಾರಿಗಳು ಏನು ಮಾಡ್ತಾ ಇದಾರೆ ಎಂದು ಗಮನಿಸುತ್ತಿದ್ದೇವೆ.ನಮ್ಮ‌ಕಡೆ ಏನೇನು MOU ಗಳಿವೆ, ಡಿಟೈಲ್ ತನಿಖೆ‌ ಮಾಡಿದ್ದೇವೆ.ಮ್ಯಾಪಿಂಗ್ ಯಾವ ರೀತಿ ಮಾಡಿದ್ದಾರೆ, ಅದಕ್ಕೆ ಅನುಮತಿ ಇದೆಯಾ?ಮಾಧ್ಯಮಗಳಲ್ಲಿ ಎಲೆಕ್ಷನ್ ಅಫೀಸರ್ ಒಪ್ಪಿಕೊಂಡಿದ್ದಾರೆ.ನಮಗೆ ಹೈರ್ ಅಫೀಸರಿಂದ ಆದೇಶ ಬಂತು.ಆದೇಶ ಬಂದಿದ್ದಕ್ಕೆ ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಹೇಳಿದ್ದಾರೆ.ಯಾರು ಹೈರ್ ಅಫೀಸರ್, ಯಾರೋ ಒಬ್ಬರು ,ಇಬ್ಬರು.15000 ಸಾವಿರಕ್ಕೆ ಕೆಲಸಕ್ಕೆ ಬಂದಿರುವರನ್ನು ಅರೆಸ್ಟ್ ಮಾಡುವುದಲ್ಲ.ಯಾರು ಕಿಂಗ್ ಪಿನ್ ಇದ್ದಾರೆ, ಯಾರು ಮಂತ್ರಿಗಳು ಇದ್ದಾರೆ, ಯಾರು ಶಾಸಕರು ಇದಾರೆ.ಇವರೆಲ್ಲ ದಾಖಲಾತಿಗಳು ನಮಗೆ ಕಡೆ ಇದಾವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಶಾಸಕರ ರೆಕಮೆಂಡ್ ಮಾಡಿರುವ ದಾಖಲಾತಿ, ಶಾಸಕರು, ಮಂತ್ರಿಗಳು ಪೋನ್ ನಲ್ಲಿ ಮಾತಾಡಿದ್ದು ದಾಖಲೆ ಇದೆ.ರಾಜರಾಜೇಶ್ವರಿ, ಮಲ್ಲೇಶ್ವರಂ, ಬೊಮ್ಮನಹಳ್ಳಿ, ಮಹಾದೇವಪ್ಪರ 28 ಕ್ಷೇತ್ರದ‌ AROಗಳ ಮೇಲೆ ಕೇಸ್ ದಾಖಲು ಆಗಬೇಕು.ಪೊಲೀಸ ರು ಏನು ಮಾಡ್ತಾರೆ ಎಂದು ವೇಟ್ ಮಾಡ್ತಾ ಇದೇವಿ.ವೋಟರ್ಸ್ ಮಾನಿಪುಲೇಷನ್ ವಿಚಾರವಾಗಿ ನಾನು ಅದರ ಬಗ್ಗೆ ಈಗ ಮಾತಾಡಲ್ಲ‌.ಯಾವ ರೀತಿ ಮುಚ್ಚಲು ನೋಡ್ತಾ ಇದಾರೆ.ಹಿಂದೆ ರೇಪ್ ‌ಕೇಸ್, 40% ಕಮಿಷನ್ ಸೇರಿದಂತೆ ಅನೇಕ ಪ್ರಕರಣಗಳ ಸಿಎಂ ಯಡಿಯೂರಪ್ಪ, ಕ್ಲೀನ್ ಹ್ಯಾಂಡ್ ಇದಾರೆ‌ಎಂದು ಹೇಳಿದ್ದರು.ಅವರ ಮಂತ್ರಿಗಳನ್ನು ರಕ್ಷಣೆ ಮಾಡಲು ,ಬಿ ರಿಪೋರ್ಟ್ ಬರೆಸಿದ್ದಾರೆ.ಇದನ್ನು ಕೂಡ ಮುಚ್ಚಿಹಾಕುವ ಅನುಮಾನವಿದೆ ಎಂದು ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಬ್ಬಾಳ ಮೇಲ್ವೇತುವೆ ಅಗಲೀಕರಣಕ್ಕೆ ಒತ್ತಾಯ ಮಾಡಿದ ಕೈ ನಾಯಕರು