Select Your Language

Notifications

webdunia
webdunia
webdunia
webdunia

ನಮ್ಮ ತತ್ವ ಸಿದ್ದಾಂತ ಯಾರು ಒಪ್ಪಿಕೊಳ್ತಾರೋ ಅಂಥವರಿಗೆ ಸ್ವಾಗತ ಇದೆ - ಡಿಕೆ ಸುರೇಶ್

DK Suresh
bangalore , ಸೋಮವಾರ, 28 ಆಗಸ್ಟ್ 2023 (15:09 IST)
ನಮ್ಮ ತತ್ವ ಸಿದ್ದಾಂತ ಯಾರು ಒಪ್ಪಿಕೊಳ್ತಾರೋ ಅಂಥವರಿಗೆ ಸ್ವಾಗತ ಇದೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.ಅನ್ಯ ಪಕ್ಷಗಳ ನಾಯಕರನ್ನ ಆಪರೇಷನ್ ವಿಚಾರವಾಗಿ ಮಾತನಾಡಿದ ಅವರು ಆಲ್ ಪಾರ್ಟಿ ತ್ರೂ ನನಗೆ ಸ್ನೇಹಿತರಿದ್ದಾರೆ.ನಾವು ಸೇರಿದಾಗ ರಾಜಕೀಯವೇ ಚರ್ಚೆ ಆಗಿದೆ ಅಂತಲ್ಲ. ಅಧಿಕಾರದಲ್ಲಿ ಇದ್ದಾಗ ಹೆಚ್ಚು ಆಸಕ್ತಿ ತೋರಿಸುತ್ತಾರೆ. ನಮ್ಮ ತತ್ವ ಸಿದ್ದಾಂತ ಯಾರು ಒಪ್ಪಿಕೊಳ್ತಾರೋ ಅಂಥವರಿಗೆ ಸ್ವಾಗತ ಇದೆ.ಸ್ಥಳೀಯ ಮಟ್ಟದಲ್ಲಿ ಯಾರಿಗೆ ವಿರೋಧ ಇಲ್ವೋ ಅಂತವರನ್ನು ಸೇರಿಸಿಕೊಳ್ತೇವೆ. ಸುರೇಶ್ ಗೌಡ್ರು ಬಿಜೆಪಿಯ ಶಾಸಕರು. ಒಟ್ಟಾರೆಯಾಗಿ ಸಾಕಷ್ಟು ಜನ ಕ್ಷೇತ್ರದ ಕೆಲಸಕ್ಕೆ ಬರುವವರಿದ್ದಾರೆ.

ನಿರೀಕ್ಷೆ ಇಟ್ಟುಕೊಂಡು ಬರುವವರ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ ಮುಂದಕ್ಕೆ ನೋಡೋಣ. ನಾವು ಯಾರನ್ನೂ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡ್ತಾ ಇಲ್ಲ. ಎಲ್ಲಿ ನಮ್ಮ ಪಕ್ಷ ದುರ್ಬಲವಾಗಿದೆ ಅಲ್ಲಿ ಸಂಘಟನೆ ಗಟ್ಟಿ ಮಾಡಬೇಕಿದೆ.ಪಕ್ಷ ಸದೃಢ ಮಾಡಿ ಅಂತ ಅಧ್ಯಕ್ಷರು ವರಿಷ್ಟರು ಸೂಚನೆ ನೀಡಿದ್ದಾರೆ.ಎಲ್ಲೆಲ್ಲಿ ವೀಕ್ ಇದೀವಿ ಆ ಕ್ಷೇತ್ರಗಳಲ್ಲಿ ಹೆಚ್ಚು ಗಮನ ಹರಿಸಬೇಕು. ಎಐಸಿಸಿ ನಾಯಕರಿಂದ ಈ ಸೂಚನೆ ಇದೆ.ಆಡಳಿತ ಒಂದು ಕಡೆಯಾದರೆ ಪಕ್ಷ ಸಂಘಟನೆ ಜೊತೆ ಜೊತೆಯಾಗಿ ಮಾಡಬೇಕಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಪಕ್ಷ ಬಿಡುವ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಿಲ್ಲ-ಎಸ್ ಟಿ ಸೋಮಶೇಖರ್