Publish Date: Sun, 15 Sep 2019 (19:06 IST)
Updated Date: Sun, 15 Sep 2019 (19:08 IST)
ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಅಂಗವಾಗಿ ಸಾಲು ಮರದ ತಿಮ್ಮಕ್ಕ ಮಾದರಿ ಕೆಲಸ ಮಾಡಿದ್ದಾರೆ.
ಗಿಡ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಾಲು ಮರದ ತಿಮ್ಮಕ್ಕ ಮುಂದಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಸಲುವಾಗಿ ಬಿಜೆಪಿ ವತಿಯಿಂದ ಗಿಡ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಚಾಲನೆ ನೀಡಿದರು.
ಬೆಂಗಳೂರಿನ ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿಯಲ್ಲಿ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಸಲುವಾಗಿ ಗಿಡ ನೇಡುವ ಕಾರ್ಯಕ್ರಮಕ್ಕೆ ಸಾಲುಮರದ ತಿಮ್ಮಕ್ಕ ಭೇಟಿ ನೀಡಿದ್ರು. ಗಿಡ ನೇಡುವ ಮೂಲಕ ಯುವಕರಲ್ಲಿ ಗಿಡ ನೆಟ್ಟು ಅದನ್ನು ಪೋಷಿಸುವ ಹವ್ಯಾಸ ಬೆಳೆಸಿಕೊಳ್ಳಲು ಪ್ರಯತ್ನಿಸಿ. ಪರಿಸರವನ್ನು ಉಳಿಸಿ ಬೆಳೆಸುವಂತ ಕೆಲಸ ಮಾಡಬೇಕು ಎಂದ್ರು.