Select Your Language

Notifications

webdunia
webdunia
webdunia
webdunia

ಆಯುಷ್ಮಾನ ಭಾರತ ಶುರು

ಆಯುಷ್ಮಾನ ಭಾರತ ಶುರು
ಕಲಬುರಗಿ , ಭಾನುವಾರ, 15 ಸೆಪ್ಟಂಬರ್ 2019 (16:59 IST)
ಆಯುಷ್ಮಾನ ಭಾರತ ವರ್ಷಾಚರಣೆಗೆ ಲೋಕಸಭೆ ಸದಸ್ಯ ಚಾಲನೆ ನೀಡಿದ್ದಾರೆ.

ಆಯುಷ್ಮಾನ ಭಾರತ ಯೋಜನೆ ಜಾರಿಗೊಂಡು  ಸೆಪ್ಟೆಂಬರ್ 23 ರಂದು ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ಈ ಒಂದು ವರ್ಷದಲ್ಲಿ ಕಲಬುರಗಿ ಜಿಲ್ಲೆಯ  1.5 ಲಕ್ಷಕ್ಕಿಂತ ಹೆಚ್ಚು ಜನರು ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಹೇಳಿದ್ದಾರೆ.

ಕಲಬುರಗಿ ಮಿನಿ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿರುವ “ಆಯುಷ್ಮಾನ ಭಾರತ” ಪಾಕ್ಷಿಕ ದಿನಾಚರಣೆಯ ಜಾಥಾ ಕಾರ್ಯಕ್ರಮಕ್ಕೆ  ಚಾಲನೆ ನೀಡಿ,  ಆಯುಷ್ಮಾನ ಭಾರತ ಯೋಜನೆಯ ಬಗ್ಗೆ  ಜನರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸೆಪ್ಟೆಂಬರ್ 15 ರಿಂದ 30 ರವರೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಉಪ ಆರೋಗ್ಯ ಕೇಂದ್ರಗಳಲ್ಲಿ ಮತ್ತು ನೋಂದಾಯಿತ ಆಸ್ಪತ್ರೆಗಳಲ್ಲಿ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಲಾಗುವುದು ಎಂದ್ರು.

ಆಯುಷ್ಮಾನ ಭಾರತ ಯೋಜನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಖ್ಯವಾದ ಯೋಜನೆಯಾಗಿದ್ದು, ಕಲಬುರಗಿ ಜಿಲ್ಲೆಯ ಬಿ.ಪಿ.ಎಲ್. ಹಾಗೂ ಎ.ಪಿ.ಎಲ್. ಕಾರ್ಡ್ ಫಲಾನುಭವಿಗಳು ಹೆಲ್ತ್  ಕಾರ್ಡುಗಳನ್ನು  ಪಡೆದು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಆಡಳಿತವನ್ನು ಮೆಚ್ಚಿ ನಾಯಕರು ಬಿಜೆಪಿ ಪಕ್ಷಕ್ಕೆ ಬರುತ್ತಿದ್ದಾರೆ- ಉಮೇಶ್ ಜಾಧವ್