Select Your Language

Notifications

webdunia
webdunia
webdunia
webdunia

ಬೀದಿ ನಾಯಿ ಪರ ಹೋರಾಟ ಮಾಡುವವರ ಈ ಸುದ್ದಿ ಓದಲೇ ಬೇಕು, ಇದ್ದ ಮನೆ ಮಗಳನ್ನೇ ಕಳೆದುಕೊಂಡ ಕುಟುಂಬ

ಭಾರತದಲ್ಲಿ ಬೀದಿ ನಾಯಿ ದಾಳಿ

Sampriya

ದಾವಣಗೆರೆ , ಸೋಮವಾರ, 18 ಆಗಸ್ಟ್ 2025 (17:54 IST)
ದಾವಣಗೆರೆ: ಬೀದಿ ನಾಯಿಯಿಂದ ಕಚ್ಚಿಸಿಕೊಂಡು, ‌ ರೇಬಿಸ್ ಕಾಯಿಲೆಗೆ ತುತ್ತಾಗಿದ್ದ ನಾಲ್ಕು ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟವೆ ದಾವಣಗೆರೆಯಲ್ಲಿ ವರದಿಯಾಗಿದೆ. 

ಮೃತ ಬಾಲಕಿ ದಾವಣಗೆರೆ ನಗರದ ಶಾಸ್ತ್ರಿ ಲೇಔಟ್‌ನ ನಿವಾಸಿ ಮೊಹಮ್ಮದ್ ಶಾಕೀರ್ ಆಲಿ, ಅತೀಹಾ ಖಾನಂ ದಂಪತಿಯ ಮಗಳು ಖದೀರಾ ಬಾನು (4) ಎಂದು ಗುರುತಿಸಲಾಗಿದೆ.

ಬೀದಿ ನಾಯಿಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಗೆ ಪೋಷಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಯನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಿ ಮನೆಗೆ ಕರೆತಂದಿದ್ದರು. ಆದರೆ ಒಂದು ತಿಂಗಳ ಹಿಂದೆ ಬಾಲಕಿ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿದ್ದಳು. 

ಗಾಬರಿಗೊಂಡ ಪೋಷಕರು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದು, ತಪಾಸಣೆ ನಡೆಸಿದ ವೈದ್ಯರು ಮಗುವಿಗೆ ರೇಬಿಸ್ ತಗಲಿರುವುದು ಪತ್ತೆಯಾಗಿದೆ. 

ಕೂಡಲೇ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ. ಒಬ್ಬಳೇ ಮಗಳಿಂದ ಪೋಷಕರಿಗೆ ಇದೀಗ ದಿಕ್ಕುತೋಚದಂತಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಂಬಕ್ಕೆ ಕಟ್ಟಿ ಯೋಧನ ಮೇಲೆ ಏಕಾಏಕಿ ದಾಳಿ ನಡೆಸಿದ ಗುಂಪು, Viral Video