Select Your Language

Notifications

webdunia
webdunia
webdunia
webdunia

ಕಾಂಗ್ರೆಸ್​ಗೆ ಇದು ಶುಭ ಶಕುನವಲ್ಲ

This is not a good omen for Congress
bangalore , ಮಂಗಳವಾರ, 20 ಜೂನ್ 2023 (14:30 IST)
ರಾಜ್ಯದಲ್ಲಿ ಮಳೆ ಕೊರತೆ ಹಿನ್ನಲೆಯಲ್ಲಿ ಕಾಂಗ್ರೆಸ್​ಗೆ ಇದು ಶುಭಶಕುನವಲ್ಲ ಎನ್ನುವ ಮೂಲಕ ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ​.ವಿಜಯೇಂದ್ರ ಟ್ವೀಟ್ ಮೂಲಕ ರಾಜ್ಯ ಸರ್ಕಾರವನ್ನು ಕುಟುಕಿದ್ದಾರೆ. ಗ್ಯಾರಂಟಿ ಕಸರತ್ತಿನಲ್ಲಿ ಕಳೆದು ಹೋಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಂತಿಲ್ಲ. ವರುಣನ ಅವಕೃಪೆ ಇಡೀ ರಾಜ್ಯವನ್ನು ಆವರಿಸಿದೆ. ಬರಗಾಲ ತನ್ನ ಕೆನ್ನಾಲಿಗೆ ಚಾಚಲು ಆರಂಭಿಸಿದೆ. ನೀರಿಲ್ಲದೆ ತತ್ತರಿಸಿರುವ ಮಹಿಳೆಯರು ಆಕ್ರೋಶಿತರಾಗಿದ್ದಾರೆ. ಮುಂಜಾಗ್ರತೆ ವಹಿಸದಿದ್ದರೆ ಉದ್ಭವಿಸುವ ಭೀಕರತೆಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ವಿಜಯೇಂದ್ರ ಅವರು ಟ್ವೀಟ್​ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ತೆರಿಗೆ ಹಣದಲ್ಲಿ ಅಕ್ಕಿ ಕೊಡೋದು