ಮದ್ಯ ಉದ್ಯಮಿ ದಿನೇಶ್ ಅರೋರಾ ಅವರು ಸಿಂಗ್ ಅವರಿಗೆ 3 ಕೋಟಿ ರು. ನೀಡಿದ್ದರು ಮತ್ತು ಈ ಮೊತ್ತವು ದೆಹಲಿ ಮದ್ಯ ನೀತಿ ಪ್ರಕರಣದ ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ಸಿಂಗ್ ಅವರ ವಿಚಾರಣೆ ಅಗತ್ಯವಾಗಿದ್ದು, 10 ದಿನ ಕಾಲ ವಶಕ್ಕೆ ನೀಡಬೇಕು ಎಂದು ಕೋರ್ಟ್‌ಗೆ ಇ.ಡಿ. ಮನವಿ ಮಾಡಿತು. ಆದರೆ ಇದನ್ನು ಸಂಜಯ ಸಿಂಗ್ ವಿರೋಧಿಸಿ, ಆರೋಪಗಳೆಲ್ಲ ನಿರಾಧಾರ ಎಂದರು. ಕೊನೆಗೆ ಅ.10ರವರೆಗೆ ಇ.ಡಿ. ವಶಕ್ಕೆ ಸಿಂಗ್‌ರನ್ನು ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿತು. ಈ ನಡುವೆ, ಕೋರ್ಟ್ ಹೊರಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಂಜಯ ಸಿಂಗ್, ಇದು ಮೋದಿ ಅವರ ಅನ್ಯಾಯ. ಅವರು ಚುನಾವಣೆಯಲ್ಲಿ ಸೋಲುತ್ತಾರೆ ನೋಡುತ್ತಿರಿ ಎಂದು ಕಿಡಿಕಾರಿದ್ದಾರೆ.