Publish Date: Fri, 19 Dec 2025 (16:14 IST)
Updated Date: Fri, 19 Dec 2025 (16:20 IST)
ಬೆಂಗಳೂರು: ದಕ್ಷಿಣ ಬೆಂಗಳೂರಿನಲ್ಲಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದ ಐದು ವರ್ಷದ ಬಾಲಕನಿಗೆ ಹಿಂದೆಯಿಂದ ಬಂದ ವ್ಯಕ್ತಿ ಕಾಲಿನಿಂದ ಒದ್ದು ವಿಕೃತಿ ಮೆರೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಸಿಸಿಟಿವಿ ದೃಶ್ಯಾವಳಿ ವೈರಲ್ ಬೆನ್ನಲ್ಲೇ ಬನಶಂಕರಿ ಪೊಲೀಸರು 35 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ರಂಜನ್ ಎಂದು ಗುರುತಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆತ ಮಾನಸಿಕವಾಗಿ ಸ್ಥಿರವಾಗಿಲ್ಲ ಎಂದು ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನೀವ್ ಜೈನ್ ಎಂಬ ಮಗು ತನ್ನ ತಾಯಿ ಮತ್ತು ಸಂಬಂಧಿಕರೊಂದಿಗೆ ಅವರ ನಿವಾಸದ ಬಳಿ ಆಟವಾಡುತ್ತಿದ್ದಾಗ ಹಿಂದೆಯಿಂದ ಬಂದ ರಂಜನ್ ಮಗುವಿನ ಮೇಲೆ ಬಲವಾಗಿ ಕಾಲಿನಿಂದ ಒದೆಯುತ್ತಾನೆ.
ಸಿಸಿಟಿವಿಯಲ್ಲಿ ರಂಜನ್ ತನ್ನ ಗೇಟ್‌ನಿಂದ ಹೊರಬರುವುದನ್ನು ಮತ್ತು ಹುಡುಗನನ್ನು ಹಿಂದಿನಿಂದ ಇದ್ದಕ್ಕಿದ್ದಂತೆ ಒದೆಯುವುದನ್ನು ದೃಶ್ಯಗಳು ತೋರಿಸುತ್ತವೆ, ಇದರಿಂದಾಗಿ ಅವನು ರಸ್ತೆಯಲ್ಲಿ ಮುಖಕ್ಕೆ ಬೀಳುತ್ತಾನೆ.
ಬಿದ್ದ ರಭಸಕ್ಕೆ ಬಾಲಕನ ಮುಖ, ಕಾಲು ಮತ್ತು ಕೈಗಳ ಮೇಲೆ ಗಾಯಗಳಾಗಿವೆ. ಮಗನೊಂದಿಗೆ ಅಣ್ಣನ ಮನೆಗೆ ಬಂದಿದ್ದ ಆತನ ತಾಯಿ ದೀಪಿಕಾ ಜೈನ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.