Select Your Language

Notifications

webdunia
webdunia
webdunia
webdunia

ಸಚಿವ ಸತೀಶ್ ಜಾರಕಿಹೊಳಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಇದೆಂಥಾ ಅವಘಡ

Satish Jarakiholi Escaped From Accident
ಹಾವೇರಿ: ಇನ್ನೇನು ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಮುಗಿಸಿ ತೆರಳುಬೇಕೆನ್ನುಷ್ಟರಲ್ಲಿ ಪೆಂಡಲ್ ಕುಸಿದು ಬಿದ್ದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆದಿದೆ.

ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿ ಶಂಕುಸ್ಥಾಪನೆಯ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ತೆರಳುವ ಮೊದಲು ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು. 

ಈ ವೇಳೆ ಹಾಕಿದ್ದ ಪೆಂಡಾಲ್ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ತೊಂದರೆಗಳು ಆಗಿಲ್ಲ. ಕಾರ್ಯಕ್ರಮ ನಡೆಯುವಾಗಲೇ ಕುಸಿದಿದ್ದರೆ ಹಲವು ಮಂದಿಗೆ ಗಾಯವಾಗುವ ಸಾಧ್ಯತೆ ಇತ್ತು.

ಈ ಘಟನೆಯಿಂದ ಕ್ಷಣ ಕಾಲ ವಿಚಲಿತರಾದ ಸತೀಶ್ ಜಾರಕಿಹೊಳಿ ಧೂಳು ಮಿಶ್ರಿತ ಸುಂಟರಗಾಳಿಗೆ ಪೆಂಡಾಲ್ ಕುಸಿದು ಬಿದ್ದಿದೆ. ಸುಂಟರಗಾಳಿಯಿಂದ ಏನೋ ಆಗಿಲ್ಲ ಎಂದು ಹೇಳಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ ಎಸ್‌ಪಿ ಪವನ್ ನಿಜ್ಜೂರ್ ಆತ್ಮಹತ್ಯೆ ವದಂತಿ, ಸ್ಪಷ್ಟನೆ ನೀಡಿದ ಸ್ನೇಹಿತ ಡಿಸಿಪಿ ಶ್ರೀಹರಿಬಾಬು