Select Your Language

Notifications

webdunia
webdunia
webdunia
webdunia

ಬೈಕು,ಕಾರು,ಆಟೋವನ್ನ ಕ್ಷಣಮಾತ್ರದಲ್ಲಿ ಕದ್ದು ಎಸ್ಕೇಪ್ ಆಗುವ ಕಳ್ಳರು ಅಂದರ್

ಬೈಕು,ಕಾರು,ಆಟೋವನ್ನ ಕ್ಷಣಮಾತ್ರದಲ್ಲಿ ಕದ್ದು ಎಸ್ಕೇಪ್ ಆಗುವ ಕಳ್ಳರು ಅಂದರ್
bangalore , ಭಾನುವಾರ, 14 ಆಗಸ್ಟ್ 2022 (13:25 IST)
ಎಣ್ಣೆ ಹೊಡೆದ್ರೆ ಸಾಕು ಏನಾದ್ರೂ‌ ಕದಿಯಲೇ ಬೇಕು. ಹೀಗೆ ಬೈಕು, ಕಾರು, ಆಟೋ ಏನೇ ಆಗಲಿ ಕ್ಷಣಮಾತ್ರದಲ್ಲಿ ಕದ್ದು ಕಳ್ಳರು ಎಸ್ಕೇಪ್ ಹಾಕ್ತಿದ್ದಾರೆ.ಕದ್ದ ವಾಹನಗಳನ್ನ ಕೊಳ್ಳೋರ ಜೊತೆ ಸಂಚಾರಿ ಪೊಲೀಸರಿಗೂ ಖದೀಮರು ಯಾಮಾರಿಸ್ತಾರೆ.ನಂಬರ್ ಪ್ಲೇಟ್ ಬದಲಿಸಿ ಎಷ್ಟು ಸಿಕ್ರೆ ಅಷ್ಟಕ್ಕೆ ವಾಹನಗಳನ್ನ ಕಳ್ಳರು ಮಾರಾಟಮಾಡ್ತಿದ್ದಾರೆ.ಇನ್ನು ಹುಳಿಮಾವು ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.ನದೀಂ ಅಹಮದ್ ಹಾಗೂ ಗುಲಾಂ ಹುಸೇನ್ ಬಂಧಿತ ಆರೋಪಿಗಳಾಗಿದ್ದಾರೆ.
 
ಇನ್ನೂ ಮದ್ಯದ ನಶೆಯಲ್ಲಿ ಯಾವ ವಾಹನ ಕಂಡರೂ ಕ್ಷಣಮಾತ್ರದಲ್ಲಿ ಆರೋಪಿಗಳು ಎಗರಿಸುತ್ತಿದ್ದರು‌ .ಕದ್ದ ವಾಹನದ ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದರು.ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಹುಳಿಮಾವು, ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ಆರೋಪಿಗಳು ಕಳ್ಳತನ ಮಾಡ್ತಿದ್ದರು.ಜೈಲಿಗೆ ಹೋಗಿ‌ ಬಂದರೂ ಮತ್ತದೇ ಕೃತ್ಯ ಮುಂದುವರೆಸಿದ್ದರು.ಈಗ ಪೊಲೀಸರು ಬಂಧಿತರಿಂದ 2 ಆಟೋ, 1 ಕಾರು 6 ಬೈಕುಗಳ ಜಪ್ತಿಮಾಡಿದ್ದಾರೆ. ಅಷ್ಟೇ ಅಲ್ಲದೆ ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಯುಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೇಂಟ್ ಮಾಲೋದ ಸಮುದ್ರ ಅಲೆಗಳ ವೈಭವ..!