Select Your Language

Notifications

webdunia
webdunia
webdunia
webdunia

ಆಟೋ-ಕಾರು ಅಪಘಾತ: ಮಹಿಳೆ ಸಾವು

ಆಟೋ-ಕಾರು ಅಪಘಾತ: ಮಹಿಳೆ ಸಾವು
bangalore , ಸೋಮವಾರ, 25 ಜುಲೈ 2022 (20:17 IST)
ಆಪೇ ಆಟೋ ಮತ್ತು ಓಮಿನಿ ಕಾರಿನ ನಡುವೆ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಸಮೀಪ ಸೋಮವಾರ ಮುಂಜಾನೆ ಸಂಭವಿಸಿದೆ. ಮೈಸೂರಿನ ಜೆಪಿ ನಗರ ನಿವಾಸಿ ವಿಶಾಲಾಕ್ಷಿ ಮೃತ ಮಹಿಳೆ.ಅಪಘಾತದಲ್ಲಿ ಮೃತ ವಿಶಾಲಾಕ್ಷಿ ಪತಿ ಶಂಕರ್ ಹಾಗೂ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಪೇ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಮಳವಳ್ಳಿ ತಾಲೂಕಿನ ನಂಜೇಗೌಡನಪುರ ಗ್ರಾಮಸ್ಥರಾದ ರಾಜು, ಮಣಿ, ರತ್ನಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳ ರಕ್ಷಣೆ‌ ಮಾಡಲಾಗಿದೆ. ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉ.ಕನ್ನಡ ಜನತೆಗೆ ಮಣಿದ ಡಾ.ಸುಧಾಕರ್​