ಅಪರಾಧಿಗಳು ಯಾವುದೇ ಜಾತಿ, ಧರ್ಮದವರೇ ಇರಲಿ,ನಿರಪರಾಧಿಗಳಿಗೆ ತೊಂದರೆ, ಶಿಕ್ಷೆ ಆಗಬಾರದು ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.ಸದಾಶಿವನಗರದಲ್ಲಿ ಕೆಜಿ ಹಳ್ಳಿ ಡಿ ಜೆ ಹಳ್ಳಿ ಗಲಭೆ ವಿಚಾರದಲ್ಲಿ ಕ್ಯಾಬಿನೆಟ್ ಉಪ ಸಮಿತಿ ರಚನೆಗೆ ಬಿಜೆಪಿ ವಿರೋಧ ವಿಚಾರವಾಗಿ ಮಾತನಾಡಿದ ಅವರು ನಮ್ಮ ಕಾಂಗ್ರೆಸ್ ಪಕ್ಷದ ಸಿದ್ದಾಂತ ಇದೆ.ಅಪರಾಧಿಗಳು ಯಾವುದೇ ಜಾತಿ, ಧರ್ಮದವರೇ ಇರಲಿ.ನಿರಪರಾಧಿಗಳಿಗೆ ತೊಂದರೆ,ಶಿಕ್ಷೆ ಆಗಬಾರದು.ಇದಕ್ಕೆ ಬಿಜೆಪಿ ಅವರು ಭಯ ಪಡುವ ಅವಶ್ಯಕತೆ ಇಲ್ಲ.ತಪ್ಪು ಮಾಡಿದವರು ಭಯ ಪಡಲಿ.ತಪ್ಪು ಮಾಡಿಲ್ಲಾ ಅಂದ್ರೆ ಬಿಜೆಪಿಯವರು ಹೆದರುವುದು ಯಾಕೆ.ನಿರಪರಾಧಿಗಳ ರಕ್ಷಣೆ ಮಾಡಲ್ಲ.ತನಿಖೆ ಆಗುವ ಮೊದಲು ನಿರಾಪರಾಧಿ, ಅಪರಾಧಿ ಅಂತ ಹೇಳಲಾಗಲ್ಲ. ತನಿಖೆಯಲ್ಲೇ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.ಇನ್ನೂ ರಾಜ್ಯಪಾಲರಿಗೆ ನಾಮನಿರ್ದೇಶನ ಪತ್ರ ಹೋಗದ ವಿಚಾರವಾಗಿ ಪ್ರತಿಕ್ರಿಯಿಸಿ ಈಗಾಗಲೇ ಈ ಬಗ್ಗೆ ಚರ್ಚೆಯಾಗಿದೆ.
ಇನ್ನೂ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಿಲ್ಲಬೇಕು ಎಂಬ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿ
ಇದು ನನ್ನ ಗಮನಕ್ಕೆ ಬಂದಿಲ್ಲ.ಇಂದು ಯಾವುದೇ ವರ್ಗಾವಣೆ ದಂಧೆ ನಡೀತಿಲ್ಲ.ಪ್ರತೀ ವರ್ಷ ಯಾವುದೇ ಸರ್ಕಾರ ಬಂದಾಗ ವರ್ಗಾವಣೆ ನಡೆಯುತ್ತೆ. ಹೊಸದಾಗಿ ಸರ್ಕಾರ ಬಂದಾಗ ಹೆಚ್ಚಾಗುತ್ತೆ. ಸರ್ಕಾರ ಬಂದಾಗ, ಆಡಳಿತಾತ್ಮಕ ವಿಚಾರವಾಗಿ ವರ್ಗಾವಣೆ ಆಗುತ್ತದೆ. ರಾಯರೆಡ್ಡಿ ಯಾವ ಅರ್ಥದಲ್ಲಿ ಹೇಳುದ್ರೋ ಗೊತ್ತಿಲ್ಲ. ಅವರು ಏನಾದ್ರೂ ಮಾತಾಡಿದ್ರೆ ಅದನ್ನು ಪಕ್ಷ, ಮುಖ್ಯಮಂತ್ರಿ ನೋಡಿಕೊಳ್ತಾರೆ ಎಂದರು. ಇನ್ನೂ ಲೋಕಸಭೆ ಸ್ಪರ್ಧೆಗೆ ಸಚಿವರಿಂದ ನಿರಾಸಕ್ತಿ ವಿಚಾರವಾಗಿ ಪ್ರತಿಕ್ರಿಯಿಸಿ ನಾನು ಸಹ ದೆಹಲಿಯ ಸಭೆಯಲ್ಲಿ ಭಾಗಿಯಾಗಿದ್ದೆ.ಸಭೆಯಲ್ಲಿ ಚರ್ಚೆ ಆಗಿಲ್ಲ, ಆದರೆ ಕೆಲ ಸಂದರ್ಭಗಳಲ್ಲಿ ಕೇಳಬೇಕಾಗುತ್ತದೆ. ಲೋಕಸಭೆಗೆ ಸಚಿವರನ್ನು, ಶಾಸಕರನ್ನ ಪರಿಗಣಿಸುತ್ತಾರೆ. ಪರಿಗಣಿಸಿದರೆ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.