Webdunia - Bharat's app for daily news and videos

Install App

ಪ್ರೀತಿ ವಿಚಾರಕ್ಕೆ ಗಲಾಟೆ, ಗ್ರಾಮಕ್ಕೆ ನುಗ್ಗಿ ಅಟ್ಟಹಾಸ ಮೆರೆದ 30 ಜನ ಮುಸುಕುಧಾರಿಗಳು

Webdunia
ಮಂಗಳವಾರ, 2 ಜನವರಿ 2024 (20:04 IST)
ಬೆಳಗಾವಿ ಗ್ರಾಮೀಣ ಭಾಗದ ನಾವಗೆ ಗ್ರಾಮಕ್ಕೆ 30ಕ್ಕೂ ಹೆಚ್ಚು ಮುಸುಕುಧಾರಿಗಳು ನುಗ್ಗಿ ದಾಂಧಲೆ ನಡೆಸಿದ್ದಾರೆ. ಬಂದೂಕು, ತಲ್ವಾರ್, ರಾಡ್ಗಳ ಸಮೇತ ಬಂದಿದ್ದ 30ಕ್ಕೂ ಹೆಚ್ಚು ಮುಸುಕುಧಾರಿಗಳು ಗ್ರಾಮದ ನಾಲ್ಕು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡಿದ್ದಾರೆ.

 ಸಿನಿಮೀಯ ರೀತಿಯಲ್ಲಿ ಗ್ರಾಮಕ್ಕೆ ನುಗ್ಗಿ ಪುಂಡರು ಅಟ್ಟಹಾಸ ಮೆರೆದಿರುವ ಘಟನೆ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಪ್ರಕರಣ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು  6 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.  ಬಂದೂಕು, ತಲ್ವಾರ್, ರಾಡ್ಗಳ ಸಮೇತ ಬಂದಿದ್ದ 30ಕ್ಕೂ ಹೆಚ್ಚು ಮುಸುಕುಧಾರಿಗಳು ಗ್ರಾಮದ ನಾಲ್ಕು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡಿದ್ದಾರೆ. ಇದರಿಂದ ಮನೆಯ ಕಿಟಕಿ ಗಾಜುಗಳು, ಗೋಡೆಗೆ ಅಂಟಿಸಿದ್ದ ಟೈಲ್ಸ್ ಪುಡಿ ಪುಡಿಯಾಗಿವೆ. ಅಲ್ಲದೆ ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರು, ಆರು ಬೈಕ್ ಜಖಂಗೊಳಿಸಿದ್ದಾರೆ. ಈ ಮುಸುಕುಧಾರಿಗಳು ಮಾಜಿ ಮತ್ತು ಹಾಲಿ ಗ್ರಾಮ ಪಂಚಾಯತಿ ಸದಸ್ಯರ ಮನೆ ಮೇಲೂ ದಾಳಿ ಮಾಡಿದ್ದಾರೆ.

ರಾತ್ರಿ ಪ್ರೀತಿ ವಿಚಾರವಾಗಿ ಬಾದರವಾಡಿ ಮತ್ತು ನಾವಗೆ ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿದೆ. ಈ ನಾವಗೆ ಗ್ರಾಮದ ಮುಖಂಡರು ಮತ್ತು ಪಂಚರು ಮಧ್ಯಪ್ರವೇಶಿಸಿ, ಯುವಕರಿಗೆ ಎರಡೇಟು ನೀಡಿ ಜಗಳ ಬಿಡಿಸಿದ್ದರು. ಇದಾದ ಬಳಿಕ ನಾವಗೆ ಗ್ರಾಮದ ಯುವಕರು ಬಾದರವಾಡಿ ಯುವಕರಿಗೆ ನಿಮ್ಮನ್ನು ನೋಡಿಕೊಳ್ಳುವುದಾಗಿ ವಾರ್ನಿಂಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಾದರವಾಡಿ ಗ್ರಾಮದ ಯುವಕರು ನಾವಗೆ ಗ್ರಾಮಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪುಂಡರ ಅಟ್ಟಹಾಸ ಕಂಡು ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್, ಇಬ್ಬರು ಎಸಿಪಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಕ್ತದ ಮಡುವಿನಲ್ಲಿ ನಿವೃತ್ತ ಪೊಲೀಸ್ ಓಂ ಪ್ರಕಾಶ್‌ ಮೃತದೇಹ ಪತ್ತೆ, ಮನೆಯವರೇ ಮೇಲೆ ಡೌಟ್‌

ಸಿಎಂ ಕುರ್ಚಿ ಗುದ್ದಾಟದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್

Video vira: ವಿದ್ಯುತ್ ಶಾಕ್‌ನಿಂದ ಒದ್ದಾಟುತ್ತಿದ್ದ ಬಾಲಕನ ಪಾಲಿಗೆ ನಿಜವಾದ ಹೀರೋ ಆದ ಯುವಕ, ಇದಪ್ಪ ದೈರ್ಯ

ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

ಕಸದಲ್ಲಿ ಶಿಶುವಿನ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಅಪ್ರಾಪ್ತೆಗೆ ಗರ್ಭಪಾತ ಮಾಡಿಸಿದ್ದ ಆಟೊ ಚಾಲಕ ಅಂದರ್‌

ಮುಂದಿನ ಸುದ್ದಿ
Show comments