Publish Date: Tue, 31 Mar 2020 (17:49 IST)
Updated Date: Tue, 31 Mar 2020 (17:52 IST)
ಕೊರೊನಾ ವೈರಸ್ ಹಾವಳಿ ವಿಪರೀತವಾಗುತ್ತಿರುವ ಪರಿಸ್ಥಿತಿಯಲ್ಲಿ ಈ ರಾಜ್ಯದವರಿಗೆ ರಸ್ತೆ ಸಂಚಾರ ಮತ್ತೆ ಆರಂಭ ಮಾಡೋದೇ ಇಲ್ಲ ಅಂತ ಸಚಿವರೊಬ್ಬರು ಖಡಕ್ ಆಗಿ ಹೇಳಿದ್ದಾರೆ.
ರಾಜ್ಯದ ಗಡಿ ಭಾಗವಾಗಿರುವ ಕಾಸರಗೋಡು ವ್ಯಾಪ್ತಿಯಲ್ಲಿ ಹಾಗೂ ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಕೇರಳದಿಂದ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆ ರಸ್ತೆ ಮಾರ್ಗದಲ್ಲಿ ಸಂಚಾರ ಸದ್ಯಕ್ಕೆ ಮತ್ತೆ ಆರಂಭ ಮಾಡೋದಿಲ್ಲ ಅಂತ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಕೊಡಗು – ಕೇರಳ ಮಾರ್ಗದಲ್ಲಿ ಸಂಚಾರ ನಿಷೇಧಿಸಿದ್ದು, ಈಗ ರಿ ಓಪನ್ ಮಾಡುವ ಚಿಂತನೆ ಇಲ್ಲವೇ ಇಲ್ಲ ಎಂದಿದ್ದಾರೆ.