Webdunia - Bharat's app for daily news and videos

Install App

ವಿಚ್ಛೇದನದಲ್ಲಿ ಪತಿಯ ಕಷ್ಟ ಕೇಳೋರೇ ಇರಲ್ಲ

Sampriya
ಶುಕ್ರವಾರ, 30 ಆಗಸ್ಟ್ 2024 (16:48 IST)
Photo Courtesy X
ಬೆಂಗಳೂರು: ವ್ಯಕ್ತಿಯೊಬ್ಬ ಮಾಜಿ ಪತ್ನಿ ಮತ್ತು ಮಕ್ಕಳ ಖರ್ಚು ವೆಚ್ಚವಾಗಿ ತಿಂಗಳಿಗೆ 2.35 ಲಕ್ಷ ನೀಡಿದರು, ಆತ ತನ್ನ ಮಕ್ಕಳೊಂದಿಗೆ ಮಾತುಕತೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಜಡ್ಜ್ ಮುಂದೆ ಬೇಡಿಕೊಂಡಿರುವ ಘಟನೆ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದಿದೆ.

ವಿಚ್ಚೇಧನದ ಬಳಿಕ ಹೇಳಿಕೊಂಡ ಹಾಗೇ ಜೀವನ ಸುಲಭವಾಗಿರುವುದಿಲ್ಲ. ಕೆಲವೊಂದು ವಿಚ್ಚೇಧನದಲ್ಲಿ ಮಾಜಿ ಪತ್ನಿ ಮತ್ತು ಮಕ್ಕಳ ಖರ್ಚು ವೆಚ್ಚಗಳನ್ನು ಆತನೇ ವಹಿಸಿಕೊಂಡು, ಪ್ರತಿ ತಿಂಗಳು ಅದನ್ನು ಚಾಚೂ ತಪ್ಪದೆ ನಿರ್ವಹಿಸಬೇಕಾಗುತ್ತದೆ.  ಇಂತಹದ್ದೇ ಪ್ರಕರಣದವೊಂದು ಬೆಳಕಿಗೆ ಬಂದಿದ್ದು, ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ನಾನು ತಿಂಗಳಿಗೆ 3.9ಲಕ್ಷ ಸಂಪಾದನೆ ಮಾಡುತ್ತಿದ್ದೇನೆ. ಅದರಲ್ಲಿ 2.35ಲಕ್ಷ ಮಾಜಿ ಹೆಂಡತಿ ಮತ್ತು ಮಕ್ಕಳ ಖರ್ಚು ವೆಚ್ಚಕ್ಕೆ ನೀಡುತ್ತಿದ್ದಾನೆ. ಒಂದು ವರ್ಷದಲ್ಲಿ 3.15ಕೋಟಿ ಹಣವನ್ನು ಪಾವತಿಸಿದ್ದೇನೆ. ಇಷ್ಟದ್ರೂ ತನ್ನ ಮಕ್ಕಳೊಂದಿಗೆ ಸರಿಯಾಗಿ ಒಂದು ಗಂಟೆಯೂ ಕೂಡಾ ಸಮಯ ಕಳೆಯಲು ಅವಕಾಶವಿಲ್ಲ. ಇದರಿಂದ ಬೇಸರಗೊಂಡ ಅಸಹಾಯಕ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.
ಈ ವೇಳೆ ಜಡ್ಜ್ ಮುಂದೆ ತಾನು ಮಾಜಿ ಪತ್ನಿಯ ಹಾಗೂ ಮಕ್ಕಳಿಗೆ ತಿಂಗಳಿಗೆ ಖರ್ಚಿಗೆ ಹಣ ನೀಡುತ್ತಿರುವ ದಾಖಲೆಯನ್ನು ಒದಗಿಸಿದ್ದಾನೆ. ಅದಲ್ಲದೆ ಮಕ್ಕಳೊಂದಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡಿದ್ದಾನೆ. ಇದಕ್ಕೆ ಒಪ್ಪಿಗೆ ನೀಡಿದ ನ್ಯಾಯಾಧೀಶರು ಸಂಜೆ 3ರಿಂದ 7ರ ವರೆ್ಎ ಮಕ್ಕಳ ಭೇಟಿಗೆ ಅವಕಾಶ ಕಲ್ಪಿಸಿ ಆದೇಶ ನೀಡಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ತಂದೆಯ ಅಸಹಾಯಕತೆ ನೋಡಿದವರು ಇಷ್ಟೆಲ್ಲಾ ಪರಿಹಾರ ಕೊಟ್ರೂ ತನ್ನ ಮಕ್ಕಳ ಜತೆ ಸಮಯ ಕಳೆಯಲು ತಂದೆ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಡಿವೋರ್ಸ್‌ ತುಂಬಾನೇ ದುಬಾರಿ ಎಂದಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments