ರೈಲ್ವೆ ಇಲಾಖೆ ಸದ್ಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾರಣ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ಮರುಜಾರಿಗೊಳಿಸಲು ಆಗದು ಎಂದು ಇಲಾಖೆಯು ತಿಳಿಸಿದೆ. ವಿವಿಧ ದರ್ಜೆಗಳಲ್ಲಿನ ಪ್ರಯಾಣ ದರಗಳು ಈಗಾಗಲೇ ಕಡಿಮೆ ಇದೆ. ವಿವಿದ ವರ್ಗಗಳಿಗೆ ನೀಡುತ್ತಿದ್ದ ರಿಯಾಯಿತಿ ಮತ್ತು ಕಡಿಮೆ ಪ್ರಯಾಣ ದರ ಕಾರಣದಿಂದ ಇಲಾಖೆಯು ಈಗಾಗಲೇ ದೊಡ್ಡ ಮಟ್ಟದ ನಷ್ಟ ಅನುಭವಿಸಿದೆ ಎಂದು ತಿಳಿಸಿದ್ದಾರೆ. 2019-20ಕ್ಕೆ ಹೋಲಿಸಿದಲ್ಲಿ ಕೋವಿ ಪರಿಸ್ಥಿತಿಯಿಂದಾಗಿ ಕಳೆದ ಎರಡು ವರ್ಷ ಟಿಕೆಟ್ ಮೂಲದ ಆದಾಯ ಕಡಿಮೆಯಾಗಿದೆ. ಇಲಾಖೆಯ ಆರ್ಥಿಕ ಸ್ಥಿತ್ತಿಯ ಮೇಲೆ ಇದರ ಪರಿಣಾಮ ಬೀರುತ್ತಿದೆ. ರಿಯಾಯಿತಿ ನೀಡುವುದರಿಂದ ಹೊರೆ ಯಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇನ್ನು ಹಿರಿಯ ನಾಗರಿಕರೂ ಕೂಡ ಈ ನಿಯಮಕ್ಕೆ ಬೇಸರವನ್ನು ವ್ಯತ್ತ ಪಡಿಸುತ್ತಿದ್ದಾರೆ.