Publish Date: Tue, 26 Sep 2023 (16:03 IST)
Updated Date: Tue, 26 Sep 2023 (14:07 IST)
ರಾಜ್ಯದಲ್ಲಿ ದಲಿತರು ಯಾಕೆ ಸಿಎಂ ಆಗಬಾರದು ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರಕ್ಕೆ ಸಚಿವ ಆರ್ ಬಿ ತಿಮ್ಮಾಪೂರ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ನೋಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಯಲ್ಲಿದ್ದೀವಿ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಮ್ಮ ಪಕ್ಷದ AICC ಅಧ್ಯಕ್ಷರು ದಲಿತರು. ನಮ್ಮ ಪಕ್ಷದಿಂದ ದೇಶದಲ್ಲಿ ಸಿಎಂ ಮಾಡುವ ಪವರ್ ಫುಲ್ ಸ್ಥಾನ ದಲಿತರಿಗೆ ಕೊಟ್ಡಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿಎಂ ಮಾಡುವ ಅಧಿಕಾರ ನಮ್ಮ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೆ. ಬರೀ ನೀವು ಕರ್ನಾಟಕ ಮಾತ್ರ ಕೇಳ್ತಿದ್ದಿರಿ, ನಮ್ಮ ಪಕ್ಷದ ಉನ್ನತ ಸ್ಥಾನದಲ್ಲಿದೆ ದಲಿತ ನಾಯಕನಿದ್ದಾನೆ.. ಅದು ಆಗಬಾರದು ಅಂತಾ ಇಲ್ಲ, ಅದು ಇವತ್ತೇ ಆಗಬೇಕು ಅಂತಾನೂ ಇಲ್ಲಾ.. ಈಗ ನಮ್ಮ ಪಕ್ಷದ ಸಿಎಂ ಇದ್ದಾರೆ, ಇಗ್ಯಾಕೆ ಅದು ಎಂದ್ರು. ಒಬ್ಬ ಹಿರಿಯ ರಾಜಕಾರಣಿ ರಾಜಣ್ಣ, ಅವನು ದಲಿತ ನಾಯಕನಾಗಿದ್ದು, ಅವನು ತನ್ನ ವಿಚಾರ ಹೊರಹಾಕಿದ್ದಾನೆ ಅದು ತಪ್ಪಾ ಎಂದ್ರು.