Select Your Language

Notifications

webdunia
webdunia
webdunia
webdunia

ಇತರೆ ವಿಷಯಗಳ ಕುರಿತು ಚರ್ಚಿಸಲು ಬೇಕಾದಷ್ಟು ಸಮಯ ಇದೆ

Karnataka New CM
ಬೆಂಗಳೂರು: ಒಂದು ನಿರ್ದಿಷ್ಟ ಸಮಿತಿ ರಚಿಸಬೇಕೇ ಬೇಡವೇ ಎಂಬುದು ತಿಳಿದಿಲ್ಲ. ಇದು ಪಕ್ಷದ ನಾಯಕತ್ವವು ನಿರ್ಧರಿಸಬೇಕಾದ ವಿಷಯವಾಗಿದೆ ಎಂದು ಹೊಸ ಸರ್ಕಾರದ ಸಚಿವ ಸಂಪುಟ ರಚನೆ ಕುರಿತು ಪ್ರಶ್ನೆಗೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. 

ತಕ್ಷಣಕ್ಕೆ ಮುಖ್ಯಮಂತ್ರಿ ಆಯ್ಕೆಯ ಮೇಲೆ ಹೆಚ್ಚಿನ ಗಮನ ಹರಿಸಲಾಗಿತ್ತು. ಇತರೆ ವಿಷಯಗಳ ಕುರಿತು ಚರ್ಚಿಸಲು ಬೇಕಾದಷ್ಟು ಸಮಯ ಇದೆ' ಎಂದು ತಿಳಿಸಿದ್ದಾರೆ.

'ಅಗತ್ಯವಿದ್ದರೆ ಔಪಚಾರಿಕ ಸಮತಿಯನ್ನು ರಚಿಸಬಹುದು. ಇದೀಗ ಸದ್ಯದ ಮಟ್ಟಿಗೆ ಸಚಿವ ಸಂಪುಟ ರಚನೆಗೆ ಮೊದಲ ಆದ್ಯತೆಯಾಗಿದೆ. ಏಕೆಂದರೆ ಸಚಿವ ಸಂಪುಟ ಹುದ್ದೆಗಳನ್ನು ಹೆಚ್ಚು ಸಮಯ ಖಾಲಿ ಬಿಡಬಾರದು. ಸರ್ಕಾರವು ತನ್ನ ಆಡಳಿತಾತ್ಮಕ ಕೆಲಸವನ್ನು ಪುನರಾರಂಭಿಸಬೇಕಿದೆ ಎಂದು ಮಾಹಿತಿ ನೀಡಿದರು.

'ಡಿ.ಕೆ. ಶಿವಕುಮಾರ್ ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿಯುತ್ತಿದ್ದಾರೆ. ಅವರ ಬಗ್ಗೆ ವ್ಯಾಪಕ ಮನ್ನಣೆ ಇದ್ದು, ಪ್ರಶ್ನಾತೀತವಾಗಿದೆ' ಎಂದು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನ: ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಉಪತಹಶೀಲ್ದಾರ್‌