ಹಿಂದುಗಳಿಗೆ ಹೇಗೆ ಯುಗಾದಿಯೋ ಹಾಗೆಯೇ ರಂಜಾನ್ ಮುಸ್ಲಿಂ ರಿಗೆ ಪವಿತ್ರ ಹಬ್ಬ..ರಂಜಾನ್ ಮಾಸದ ಉಪವಾಸ ವ್ರತ ಆರಂಭವಾದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಒಣ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವಿಶೇಷವಾಗಿ ಖರ್ಜೂರ ಸೇರಿದಂತೆ ಇತರೆ ಒಣಹಣ್ಣುಗಳ ಖರೀದಿ ಜೋರಾಗಿದೆ.ಶಿವಾಜಿ ನಗರದ ರಸೆಲ್ ಮಾರುಕಟ್ಟೆಯಲ್ಲಿ ಡ್ರೈಫ್ರೂಟ್ ಖರೀದಿ ಜೋರಾಗಿತ್ತು. ರಿಯಾಯಿತಿ ದರದಲ್ಲಿ ಒಣಹಣ್ಣುಗಳು ಮಾರಾಟವಾಗುತ್ತಿರುವ ಕಾರಣ ಹೆಚ್ಚಿನ ಬೇಡಿಕೆಯಿದೆ. ಜೊತೆಗೆ ಎಂ.ಜಿ. ರಸ್ತೆ, ಬಸವನಗುಡಿ, ಜಯನಗರ 4ನೇ ಬ್ಲಾಕ್, ಮಲ್ಲೇಶ್ವರ, ಮಡಿವಾಳ, ಯಶವಂತಪುರ ಹೀಗೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಡ್ರೈಫ್ರೂಟ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ಸ್ಥಳೀಯ ವ್ಯಾಪಾರಸ್ಥರು ನಗರದ ವಿವಿಧ ಮಸೀದಿ ದರ್ಗಾ ಬಡಾವಣೆ ಬಸ್ ನಿಲ್ದಾಣಗಳಲ್ಲೂ ಕೂಡ ಒಣ ಹಣ್ಣುಗಳ ಮಾರಾಟದಲ್ಲಿ ತೊಡಗಿದ್ರು,
ರಸೆಲ್ ಮಾರುಕಟ್ಟೆಯಲ್ಲಿ ವಿದೇಶಿ ಸೇರಿ ಸುಮಾರು 30ಕ್ಕೂ ಹೆಚ್ಚಿನ ಬಗೆಯ ಖರ್ಜೂರಗಳು ಮಾರಾಟಕ್ಕಿವೆ. ಸೌದಿ ಅರೇಬಿಯಾ, ಜೋರ್ಡಾನ್, ಇರಾನ್, ದಕ್ಷಿಣ ಆಫ್ರಿಕಾಗಳಿಂದ ಖರ್ಜೂರ ತರಿಸಲಾಗಿದೆ. ಉಳಿದ ಒಣಹಣ್ಣುಗಳಾದ ಅರ್ಕೂಟ್ ಸೇರಿದಂತೆ ಅಷ್ಘಾನಿಸ್ತಾನದ ಪೈನ್ ಬೀಜ, ಬ್ರೆಜಿಲ್ ನಟ್ಸ್, ಆಸ್ಪ್ರೇಲಿಯಾದ ಹೆಜಲ್ ನಟ್ಸ್, ಇರಾನ್‌ನ ಒಣ ಅಂಜೂರ, ಇರಾನಿ ಬಾದಾಮಿ ಕೂಡ ಬಂದಿವೆ ಎಂದು ವ್ಯಾಪಾರಸ್ಥರು ತಿಳಿಸಿದರು.
ಅಂಗಡಿ ಮಾಲೀಕರು ಮಾತನಾಡಿ, ರಂಜಾನ್ ಎಂದು ಕೇವಲ ಮುಸಲ್ಮಾನರು ಮಾತ್ರವಲ್ಲ. ಹಿಂದೂ-ಕ್ರಿಶ್ಚಿಯನ್ನರು ಸೇರಿ ಎಲ್ಲರೂ ಒಣಹಣ್ಣುಗಳ ಖರೀದಿಗೆ ಹೆಚ್ವಾಗಿ ಬರುತ್ತಿದ್ದಾರೆ. ಕೋವಿಡ್ ಇಲ್ಲದಿದ್ದರೂ ಕಳೆದ ವರ್ಷ ಒಣಹಣ್ಣಿನ ಸೀಸನ್ ಅಷ್ಟಾಗಿ ಇರಲಿಲ್ಲ. ವ್ಯಾಪಾರವೂ ಹೇಳಿಕೊಳ್ಳುವಷ್ಟುಆಗಿರಲಿಲ್ಲ. ಆದರೆ, ಈ ಬಾರಿ ಉಪವಾಸ ಮಾಸದ ಆರಂಭದಿಂದಲೇ ಡ್ರೈಫ್ರೂಟ್‌ಗೆ ಹಿಂದೆಂದಿಗಿಂತಲೂ ಹೆಚ್ಚಿನ ಬೇಡಿಕೆ ಇದೆ ಎಂದರು.
ಇನ್ನೂ ಡ್ರೈಫ್ರೂಟ್ ಕೆ ಜಿ ಗೆ ದರ ಹೇಗಿದೆ ಅನ್ನೋದನ್ನ ನೋಡಿದಾದ್ರೆ
ಸಗಾಯಿ .700
ಕಲ್ಮಿ .700
ಅಜ್ವಾ .1200
ಮೆಡ್ಜಾಲ್ ಕಿಂಗ್ .1600
ಇರಾನ್ ಖರ್ಜೂರ .2080
ಒಣದ್ರಾಕ್ಷಿ .280
ಗೋಡಂಬಿ .840
ಬಾದಾಮಿ .720
ಅಷ್ಘಾನಿಸ್ತಾನ ಅಂಜೂರ .1400
ಸಾದಾ ಅಂಜೂರ .1200
ಪೈನಾ ನಟ್ .4000
ಕಾಶ್ಮೀರಿ ಅಕ್ರೋಟ್ .400
ಕ್ಯಾಲಿಫೋರ್ನಿಯಾ ವಾಲ್ನಟ್ .800