Publish Date: Sun, 18 Feb 2018 (10:47 IST)
Updated Date: Sun, 18 Feb 2018 (10:49 IST)
ಬೆಂಗಳೂರು : ಶಾಂತಿ ನಗರ ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಬಿಜೆಪಿ ಅಧ್ಯಕ್ಷ ವಾಸುದೇವ್ ಮೂರ್ತಿ ಅವರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
‘ಶಾಂತಿನಗರ ಕ್ಷೇತ್ರ ರೌಡಿಸಂ ಕ್ಷೇತ್ರವಾಗಿದೆ. ಗಾಂಜಾ ಹಾವಳಿ ವಿಪರೀತವಾಗಿದೆ. ಪೊಲೀಸರಿಗೆ ದೂರು ಕೊಟ್ಟರೆ ತೆಗೆದುಕೊಳ್ಳುವುದಿಲ್ಲ. ಪ್ರಭಾವ ಬಳಸಿ ಯಾವುದೇ ದೂರು ದಾಖಲಿಸುವುದಿಲ್ಲ. ಪೊಲೀಸರು ಅಲ್ಲ ಅವರೆಲ್ಲ ಹ್ಯಾರಿಸ್ ಅವರ ಚೇಲಾಗಳು’ ಎಂದು ಶಾಂತಿನಗರ ಬಿಜೆಪಿ ಅಧ್ಯಕ್ಷ ವಾಸುದೇವ್ ಮೂರ್ತಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ