Select Your Language

Notifications

webdunia
webdunia
webdunia
webdunia

ರಾಜ್ಯದ ಈ ಜಿಲ್ಲೆಯಲ್ಲಿ ಕೊರೊನಾ ರೋಗಿಗಳೇ ಇಲ್ಲ!

ರಾಜ್ಯದ ಈ ಜಿಲ್ಲೆಯಲ್ಲಿ ಕೊರೊನಾ ರೋಗಿಗಳೇ ಇಲ್ಲ!
ಗದಗ , ಶನಿವಾರ, 9 ಮೇ 2020 (19:55 IST)
ಮಹಾಮಾರಿ ಕೊರೊನಾ ವಿರುದ್ಧ ಪರಿಣಾಮಕಾರಿ ಕೆಲಸ ಮಾಡಿದ್ದರಿಂದಾಗಿ ಈ ಜಿಲ್ಲೆಯಿಂದ ಕೊರೊನಾ ಸಧ್ಯಕ್ಕೆ ಹೇಳಹೆಸರಿಲ್ಲದಂತೆ ದೂರ ಹೋಗಿದೆ.

ಗದಗ ಜಿಲ್ಲೆ ಸಧ್ಯ ಕೊರೋನಾ ಮುಕ್ತ ಜಿಲ್ಲೆಯಾಗಿದೆ. ಜಿಲ್ಲೆನಲ್ಲಿ ಒಟ್ಟು 5 ಪಾಸಿಟಿವ್ ಪ್ರಕರಣಗಳಿದ್ದವು. ಅವುಗಳ ಪೈಕಿ 80 ವರ್ಷದ ವೃದ್ದೆ ಪಿ-166 ಮೃತಪಟ್ಟಿದ್ದರು. ನಂತರ ನಾಲ್ಕು ಜನ ಗದಗ ಜಿಮ್ಸ್ ಆಸ್ಪತ್ರೆಯ ಕೊರೋನಾ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 1 ರಂದು 59 ವರ್ಷದ ಮಹಿಳೆ ಪಿ-304 ಮೊದಲು ಗುಣಮುಖರಾಗಿ ಮನೆಗೆ ಸೇರಿದ್ದರು.

ನಂತರ 42 ವರ್ಷದ ಪಿ-379, 24 ವರ್ಷದ ಪಿ-396, 75 ವರ್ಷದ ಪಿ-514 ಚಿಕಿತ್ಸೆ ಪಡೆಯುತ್ತಿದ್ದರು. ಎಲ್ಲರೂ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ.  ಬಿಡುಗಡೆಗೊಂಡ ವ್ಯಕ್ತಿಗಳಿಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಅವರನ್ನ ಸ್ವಾಗತಿಸಿ, ಮನೆಗೆ ಬೀಳ್ಕೊಟ್ಟರು.




Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಕಥೆ ಮುಗಿಯೋ ಮೊದಲೇ ಚೈನಾದಿಂದ ರಾಜ್ಯಕ್ಕೆ ಬರ್ತಿರೋದೇನು?