Publish Date: Tue, 13 Jun 2023 (13:19 IST)
Updated Date: Tue, 13 Jun 2023 (08:53 IST)
ಇತ್ತ ಬೀದರ್‌ನಲ್ಲೂ ನಾರಿ ಶಕ್ತಿ ಯೋಜನೆಯಿಂದ ಭಾರೀ ಎಫೆಕ್ಟ್ ಆಗಿದೆ. ಗಡಿ ಜಿಲ್ಲೆಯಲ್ಲಿ ಬಸ್‌ಗಳು ಸಿಗದೇ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಬಸ್ ನಿಲ್ದಾಣದಲ್ಲಿ ಪರದಾಡಿದ್ದಾರೆ. ಡಿಪೋಗಳಿಂದ ಹೆಚ್ಚಿನ ಬಸ್‌ಗಳು ಹೊರಗೆ ಬರುತ್ತಿಲ್ಲ. ಹೀಗಾಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ನಿಂತೂ ನಿಂತೂ ಹೈರಾಣಾಗಿದ್ರು. ಬರುತ್ತಿರುವ ಕೆಲವು ಬಸ್‌ಗಳಲೂ ರಶ್ ಆಗಿದ್ರಿಂದ ಬಸ್ ಹತ್ತಿ ಪ್ರಯಾಣಿಸಲು ಮಹಿಳೆಯರು, ವಿದ್ಯಾರ್ಥಿಗಳು ಪರದಾಡಿದ್ರು. ಇನ್ನೂ ಬೇಕಂತಲೇ ಸಾರಿಗೆ ಅಧಿಕಾರಿಗಳು ಡಿಪೋಗಳಿಂದ ಬಸ್ ಕಳುಹಿಸುತ್ತಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.