ಬೆಂಗಳೂರಿನ M.G.ರಸ್ತೆ ಬಳಿಯ ಗಾಂಧಿ ಪ್ರತಿಮೆ ಬಳಿ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಜಾಥಾಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಜಾಥಾಗೆ ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಯಾರಾದ್ರೂ ಬಾಲ ಕಾರ್ಮಿಕರು ಕಂಡರೆ ಕೆಲಸದಿಂದ ಬಿಡಿಸಿ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು.. ಶಿಕ್ಷಣ ಎಲ್ಲರ ಹಕ್ಕು, ಎಲ್ಲರೂ ಶಿಕ್ಷಣ ಪಡೆಯಬೇಕು.. ಬಾಲ ಕಾರ್ಮಿಕರನ್ನು ತೆಗೆದುಕೊಂಡರೆ ಅದು ಕಾನೂನು ಬಾಹಿರ.. ಹೊಟೇಲ್, ಅಂಗಡಿ, ಗಾರ್ಮೆಂಟ್ಸ್ಗಳಲ್ಲಿ ಮಕ್ಕಳ ದುಡಿಮೆ ಇದೆ, ಇದು ಶಿಕ್ಷಾರ್ಹ ಅಪರಾಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.. ಶಿಕ್ಷಣ ಇಲ್ಲದೆ ಹೊದ್ರೆ ಜ್ಞಾನ ಬರಲ್ಲ, ಗುಲಾಮಗಿರಿ ಪದ್ಧತಿ ಬರುತ್ತೆ.. ಗುಲಾಮಗಿರಿ ಮನಸ್ಥಿಯಿಂದ ಎಲ್ಲರೂ ಹೊರಗೆ ಬರಬೇಕು.. ಪ್ರತಿಯೊಬ್ಬರು ಮನುಷ್ಯರಾಗಬೇಕು.. ಜನರಿಗೆ ಜಾಗೃತಿ ಮಾಡಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ.. ಇಷ್ಟು ಮಾಡಿಯೂ ಬಾಲ ಕಾರ್ಮಿಕರು ಇದ್ರೆ, ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.