Select Your Language

Notifications

webdunia
webdunia
webdunia
webdunia

ಸಲೂನ್ ಗೆ ಹೋದ ಪಿಯುಸಿ ವಿದ್ಯಾರ್ಥಿ ಹಗಲಲ್ಲೇ ಹೆಣವಾದ

ಸಲೂನ್ ಗೆ ಹೋದ ಪಿಯುಸಿ ವಿದ್ಯಾರ್ಥಿ ಹಗಲಲ್ಲೇ ಹೆಣವಾದ
ಯಾದಗಿರಿ , ಭಾನುವಾರ, 23 ಫೆಬ್ರವರಿ 2020 (16:11 IST)
ಹೇರ್ ಕಟಿಂಗ್ ಮಾಡಿಸಿಕೊಳ್ಳೋಕೆ ಅಂತ ಹೋಗಿದ್ದ ಯುವಕನೊಬ್ಬ ಹಾಡುಹಗಲೇ ಭೀಕರವಾಗಿ ಕೊಲೆಗೀಡಾಗಿದ್ದಾನೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಪಿಯು ಕಾಲೇಜ್ ನಲ್ಲಿ ಪಿಯುಸಿ  ಓದುತ್ತಿದ್ದ ವಿದ್ಯಾರ್ಥಿ ಕೊಲೆಯಾಗಿದ್ದಾನೆ.

 ಸ್ನೇಹಿತರು ಬೈಕ್ ಮೇಲೆ ಆಗಮಿಸಿ ಮೋಹನ್ ನನ್ನು ಕರೆದುಕೊಂಡು ಹೋಗಿದ್ದಾರೆ. ಮೋಹನ್ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಕಟಿಂಗ್ ಶಾಪ್ ಗೆ ಬಂದಿದ್ದನು. ಆದರೆ ಕೊಲೆಯಾಗಿದ್ದಾನೆ.  ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಕಾಕಲವಾರ ಕ್ರಾಸ್ ಹತ್ತಿರ ಘಟನೆ ಜರುಗಿದೆ.

ನಾಲ್ಕೈದು ಗುಂಪಿನ ಯುವಕರು ಬೊರಬಂಡಾ ಗ್ರಾಮದ ವಿದ್ಯಾರ್ಥಿ  ಮೋಹನ್ ಪವಾರ್  ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಸ್ನೇಹಿತನೋರ್ವ ಮೋಹನ್ ಗೆ ಫೋನ್ ಮಾಡಿದ್ದಾನೆ. ನಂತರ ಮೋಹನ್ ಅಂಗಡಿಯಿಂದ ಹೊರಬಂದಾಗ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಗುರುಮಠಕಲ್ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಈ ದುರ್ಘಟನೆ ಜರುಗಿದೆ. ಸ್ನೇಹಿತರಾದ ಥೈರಾನ್ ಹಾಗೂ ಮಹಿಪಾಲ ಅವರು ಕೊಲೆ ಮಾಡಿ ಪರಾರಿಯಾಗಿದ್ದಾರೆಂದು ಶಂಕಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕುಡಿಯೋಕೆ ನೀರು ಕೇಳಿ ಮಹಿಳೆಯ ಕಿಡ್ನಾಪ್