ಅತ್ಯಾಚಾರ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆ ಮುಂದೆ ಕಾಯುತ್ತಿರುವ ಮಹಿಳೆ!

Webdunia
ಶನಿವಾರ, 4 ಆಗಸ್ಟ್ 2018 (18:01 IST)
ಅತ್ಯಾಚಾರ ಆರೋಪದ ಪ್ರಕರಣ ದಾಖಲಿಸಲು ಠಾಣೆ ಎದುರು ಸಂಜೆವರೆಗೂ ಕಾದರೂ ಸಹ ಎಫ್ ಐ ಆರ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಘಟನೆ ಜರುಗಿದೆ. ಗದಗ ಸಮೀಪದ ಲಕ್ಕುಂಡಿ ಗ್ರಾಮದ ಮಹಿಳೆ  ಎಫೈಆರ್ ದಾಖಲಿಸಲು ಠಾಣೆಗೆ ಬಂದ್ರೆ ಪೊಲೀಸರು ಮಾತ್ರ ಕೇರ್ ಮಾಡದೆ ಅಮಾನವೀಯವಾಗಿ ನಡೆದು ಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತೀವ್ರ ಗಾಯಗೊಂಡಿದ್ದ ಮಹಿಳೆ ಠಾಣೆ ಎದುರು ನರಳಾಡಿದರೂ ಸಹ ಪೊಲೀಸರು ಸಹಾನುಭೂತಿ ತೋರದೆ ರಾಕ್ಷಸರಂತೆ ವರ್ತಿಸಿದ್ದಾರೆ. ಲಕ್ಷ್ಮವ್ವ ಮೂಲತಃ ಲಕ್ಕುಂಡಿ ಗ್ರಾಮದ ನಿವಾಸಿ ತೋಟದ ಮನೆಯಲ್ಲಿ ವಾಸಿಸುತ್ತಿರುವ ಈಕೆ ಗಂಡ ಕುರುಡನಾಗಿದ್ದು ಅವರನ್ನ ಕರೆದುಕೊಂಡು ಬರಲು ರಾತ್ರಿ ಲಕ್ಕುಂಡಿಗೆ ಹೋಗುವ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂದು ಹೇಳಲಾಗ್ತಿದೆ.  ಮಹಿಳೆಯನ್ನು ಬೈಕ್ ನಲ್ಲಿ ಬಿಡುವುದಾಗಿ ಪುಸಲಾಯಿಸಿ ಅದೇ ಗ್ರಾಮದ ರಾಜಾಸಾಬ್ ಎಂಬುವನು ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ  ಆರೋಪಿಸಿದ್ದಾರೆ.

ಕಳೆದ ಒಂದು ವಾರದ ಹಿಂದೆ ಲಕ್ಕುಂಡಿ ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿನ ತನ್ನ ಹೊಲದ ಮನೆಯಿಂದ ಊರಲ್ಲಿರುವ ಅತ್ತೆಯ ಮನೆಗೆ ಗಂಡನನ್ನು ಕರೆಯಲೆಂದು ಬರುವಾಗ ಅದೇ ಗ್ರಾಮದ ಕುರಿಗಾಯಿ ರಾಜಾಸಾಬ್ ಎಂಬುವರು ಈ ಕೃತ್ಯ ಎಸಗಿದ್ದಾರೆ ಅಂತ ಮಹಿಳೆ ಆರೋಪ ಮಾಡ್ತಿದ್ದಾಳೆ. ಆದರೆ ಈ ಕುರಿತು ಪ್ರಕರಣ ಮಾತ್ರ ದಾಖಲಾಗಿಲ್ಲ ಎಂದು ಮಹಿಳೆ ದೂರುತ್ತಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ನಿವಾಸಿಗಳಿಗೆ ಗುಡ್‌ನ್ಯೂಸ್‌: ನ.1ರಿಂದಲೇ ಬಿಖಾತಾದಿಂದ ಎ ಖಾತಾ ಪರಿವರ್ತನೆ ಅಭಿಯಾನ

ಜಾತಿವಾರು ಸಮೀಕ್ಷೆಗೆ ಮಾಹಿತಿ ನೀಡಲು ನಾರಾಯಣಮೂರ್ತಿ ಕುಟುಂಬ ಹಿಂದೇಟು: ಕಾರಣ ಏನು ಗೊತ್ತಾ

ಕೊಪ್ಪಳದಲ್ಲಿ ರೈತರಿಗೆ ಸಲಹೆ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್, ಹೇಳಿದ್ದೇನು ಗೊತ್ತಾ

ಕೇದಾರನಾಥ ಯಾತ್ರಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಅದಾನಿ ಸಮೂಹ, ಇಲ್ಲಿದೆ ಮಾಹಿತಿ

ನನ್ನನ್ನು ಸರ್ ಎಂದು ಕರೆಯಬೇಡಿ, ಬಿಹಾರದ ಮಹಿಳಾ ಕಾರ್ಯಕರ್ತೆಗೆ ಮೋದಿ ಹೀಗೇ ಹೇಳೋದಾ

ಮುಂದಿನ ಸುದ್ದಿ
Show comments