ಬೆಂಗಳೂರು: ವ್ಯಕ್ತಿಯೊಬ್ಬರು ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದ ಬಳಿಕ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿರುವ ಘಟನೆ ಅಸ್ಸಾಂನಲ್ಲಿ ವರದಿಯಾಗಿದೆ.
ವ್ಯಕ್ತಿಯೊಬ್ಬರು ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಅಸ್ಸಾಂ ರಾಜ್ಯದ ನಲ್ಬರಿ ಜಿಲ್ಲೆಯಿಂದ ಈ ಘಟನೆ ವರದಿಯಾಗಿದೆ. ಪತ್ನಿಯಿಂದ ವಿಚ್ಛೇದನ ಪಡೆದಿದ್ದಕ್ಕಾಗಿ ಮಾಣಿಕ್ ಅಲಿ ಸುಮಾರು ನಲವತ್ತು ಲೀಟರ್ ಹಾಲಿನಿಂದ ಸ್ನಾನ ಮಾಡಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾನೆ. ಹಾಗೂ ನಾನಿನ್ನೂ ಸ್ವತಂತ್ರ ಎಂದು ಎರಡು ಕೈ ಮೇಲೆತ್ತಿ ಕುಣಿದಾಡಿದ್ದಾರೆ.
ನನ್ನ ಹೆಂಡತಿ ತನ್ನ ಪ್ರಿಯಕರನೊಂದಿಗೆ ಎರಡು ಸಲ ಓಡಿಹೋಗಿದ್ದಳು. ಆದರೂ ಮಗಳ ಭವಿಷ್ಯಕ್ಕಾಗಿ ಅವಳನ್ನು ಕ್ಷಮಿಸಿ ಮನೆಗೆ ಕರೆತಂದಿದ್ದೆ. ಅವಳು ಮೂರನೇ ಸಲ ಅದೇ ತಪ್ಪನ್ನು ಮಾಡಿದಳು ಹಾಗಾಗಿ ವಿಚ್ಛೇದನ ಮಾರ್ಗ ಆರಿಸಿಕೊಳ್ಳಬೇಕಾಯಿತು. ಮಗಳೂ ಆಕೆಯೊಂದಿಗೆ ಇರುವುದರಿಂದ ನನಗೆ ನೆಮ್ಮದಿ ಸಿಕ್ಕಂತಾಗಿದೆ. ವಿಚ್ಛೇದನದ ನಂತರ ಹೊಸ ಜೀವನ ಆರಂಭಿಸುತ್ತಿರುವೆ ಎಂದು ಮಾಣಿಕ್ ಅಲಿ ಹೇಳಿದ್ದಾರೆ.