Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧ ವಿರೋಧಿಸಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ ಪತ್ನಿ

ಅಕ್ರಮ ಸಂಬಂಧ ವಿರೋಧಿಸಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ ಪತ್ನಿ
ಬಾಗಲಕೋಟೆ , ಸೋಮವಾರ, 22 ಅಕ್ಟೋಬರ್ 2018 (06:56 IST)
ಬಾಗಲಕೋಟೆ : ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನ ಕೊಲೆ ಮಾಡಿದ ಘಟನೆ ಬಾಗಲಕೋಟೆಯ ಬಾದಾಮಿ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ನಡೆದಿದೆ.


ಮಲ್ಲಪ್ಪ ಕುಂಬಾರ (56) ಕೊಲೆಯಾಗಿರುವ ಪತಿ. ರೇಣವ್ವ ಕುಂಬಾರ ಪತಿಯನ್ನೇ ಕೊಂದ ಪಾತಕಿ. ಈಕೆ ಪ್ರಿಯಕರ ಯಲ್ಲಪ್ಪ ಕರಡಿಗುಡ್ಡ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು, ಇದು ಪತಿಗೆ ತಿಳಿಯುತ್ತಲೇ ಆತ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದಾಗ  ಪ್ರಿಯಕರನ ಜೊತೆ ಸೇರಿ ರೇಣವ್ವ ಮನೆಯಲ್ಲೇ ಪತಿ ಮಲ್ಲಪ್ಪನ ಕತ್ತನ್ನು ಹಗ್ಗದಿಂದ ಬಿಗಿದು  ಕೊಲೆ ಮಾಡಿದ್ದಾಳೆ.


ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಾದಾಮಿ ಠಾಣೆ ಪೊಲೀಸರು ಬಳಿಕ ಆರೋಪಿ ರೇಣುಕಾಳನ್ನು ವಶಕ್ಕೆ ಪಡೆದಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಯತ್ನಿಸಿದ ರೆಹನಾ ಫಾತಿಮಾಗೆ ಇಸ್ಲಾಂ ಧರ್ಮದಿಂದ ಬಹಿಷ್ಕಾರ