Select Your Language

Notifications

webdunia
webdunia
webdunia
webdunia

ಇಷ್ಟುದಿನ ಖಾಸಗಿ ಹೋಟೆಲ್ - ಸಿಎಂರಿಂದ ಈಗ ಗ್ರಾಮ ವಾಸ್ತವ್ಯ: ವ್ಯಂಗ್ಯ

ಇಷ್ಟುದಿನ ಖಾಸಗಿ ಹೋಟೆಲ್ -  ಸಿಎಂರಿಂದ ಈಗ ಗ್ರಾಮ ವಾಸ್ತವ್ಯ: ವ್ಯಂಗ್ಯ
ಬೆಂಗಳೂರು , ಮಂಗಳವಾರ, 11 ಜೂನ್ 2019 (14:46 IST)
ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ ಧರಣಿ ಮುಂದೂಡಿಕೆಯಾಗಿದ್ದು, ಜೂನ್ 13 ರಂದು ಧರಣಿ ನಡೆಸಲು ನಿರ್ಧಾರ ಮಾಡಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದು, ಮೈತ್ರಿ ಸರ್ಕಾರದ ವೈಫಲ್ಯಗಳು ಮತ್ತು ಜಿಂದಾಲ್ ಪ್ರಕರಣ ವಿರೋಧಿಸಿ ಬಿಜೆಪಿ ಯುವಮೋರ್ಚಾ ಜೂನ್ 11 ರ ಬದಲಾಗಿ ಜೂನ್ 13 ರಂದು ಧರಣಿ ನಡೆಸಲು ನಿರ್ಧಾರ ಮಾಡಿದೆ ಎಂದರು.

ಲೋಕಸಭೆ ಚುನಾವಣೆ ಬಳಿಕವಾದ್ರೂ ಸಿಎಂ ಕುಮಾರಸ್ವಾಮಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತಾರೆ ಎನ್ನುವ ಭರವಸೆ ಇತ್ತು. ಕುಮಾರಸ್ವಾಮಿ ಕೇವಲ‌ ಸಿಎಂ ಸ್ಥಾನ ಉಳಿಸಿಕೊಳ್ಳಲು ಹೊರಟಿದ್ದಾರೆ. ಕುಮಾರಸ್ವಾಮಿ ನೀಡಿದ ಪ್ರಣಾಳಿಕೆ ಭರವಸೆ ಈಡೇರಿಸುತ್ತಿಲ್ಲ. ಮಾಧ್ಯಮ ಸ್ನೇಹಿತರು ಸಿಎಂ ರನ್ನ ಪ್ರಶ್ನಿಸಿದ್ರೆ ಜೈಲಿಗೆ ಹಾಕುವ ಪ್ರವೃತ್ತಿ ನಡೆಯುತ್ತಿದೆ ಎಂದರು.

ಸ್ವತಃ ಚುನಾವಣೆಯಲ್ಲಿ ಪುತ್ರ ಸೋತ್ರೆ ಸಹಜವಾಗಿ ಮನಸ್ಸಿಗೆ ನೋವಾಗುತ್ತೆ‌‌. ಆದ್ರೆ ಸಿಎಂ ಮತ್ತು ಮಂತ್ರಿಗಳು ಜನರ ಸಮಸ್ಯೆಯತ್ತ ಗಮನಕೊಡ್ತಿಲ್ಲ. ವಿಧಾನಸೌಧ ಸಂಪೂರ್ಣ ನಿದ್ರಾವಸ್ಥೆಯಲ್ಲಿದೆ. ಇಷ್ಟು ದಿನ ಖಾಸಗಿ ಹೋಟೆಲ್ ನಲ್ಲಿದ್ದು ಇವಾಗ ಗ್ರಾಮ ವಾಸ್ತವ್ಯ ಅಂತ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವರ ಎದುರಲ್ಲೇ ಆಯನೂರು-ಕಮಿಷನರ್ ಜಟಾಪಟಿ