Select Your Language

Notifications

webdunia
webdunia
webdunia
webdunia

ಬಸ್ ನಲ್ಲಿ ಕಳೆದುಕೊಂಡಿದ ಹಣ ವಸ್ತುವನ್ನ ಪ್ರಯಾಣಿಕರಿಗೆ ಹಿಂತಿರುಗಿಸಿದ ಸಂಚಾರ ಅಧಿಕ್ಷರು

ಬಸ್ ನಲ್ಲಿ ಕಳೆದುಕೊಂಡಿದ ಹಣ ವಸ್ತುವನ್ನ ಪ್ರಯಾಣಿಕರಿಗೆ ಹಿಂತಿರುಗಿಸಿದ ಸಂಚಾರ ಅಧಿಕ್ಷರು
bangalore , ಭಾನುವಾರ, 1 ಆಗಸ್ಟ್ 2021 (18:54 IST)
ದಿನಾಂಕ:- 30/07/2021 ರಂದು ಶುಕ್ರವಾರ ಸಮಯ ಸುಮಾರು 10:35 ರಲ್ಲಿ ಇಬ್ಬರು ಪ್ರಯಾಣಿಕರು ವಾಹನ ಸಂಖ್ಯೆ  KA11 F 0465 ರಲ್ಲಿ  ಮಂಡ್ಯ ದಿಂದ ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣಕ್ಕೆ ಪ್ರಯಾಣ ಮಾಡಿರುತ್ತಾರೆ.  ಈ ಪ್ರಯಾಣಿಕರು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಬಂದಿರುತ್ತಾರೆ. ಇವರು ಬಸ್ ನ್ನು ಇಳಿದು ಆಟೋ ದಲ್ಲಿ ಹೋಗುವಾಗ ಮಾರ್ಗ ಮದ್ಯೆ ತಮ್ಮ ಹಣದ ಮತ್ತು ಸ್ಕ್ಯಾನಿಂಗ್ ರಿಪೋರ್ಟ್  ನೆನಪಾಗಿ ಮರಳಿ ಅದೇ ಆಟೋ ದಲ್ಲಿ ಬಸ್‌ ನಿಲ್ದಾಣಕ್ಕೆ ಬಂದು
 ಗೋಳಾಡುತ್ತಿದ್ದರು.  ಸ್ಕ್ಯಾನಿಂಗ್ ರಿಪೋರ್ಟ್ ಮತ್ತು 50500 ₹ ಹಣವನ್ನು ಬಸ್‌ ನಲ್ಲಿ  ಬಿಟ್ಟು ಹೋಗಿದ್ದೇವೆ.  ಇದನ್ನು ದಯವಿಟ್ಟು ಹುಡುಕಿಸಿ ಕೊಡಿ ಎಂದು ನಿಲ್ದಾಣ ದಲ್ಲಿ ಕರ್ತವ್ಯ ದಲ್ಲಿದ್ದ  ಲಕ್ಷ್ಮೇ ಗೌಡ ಸಹಾಯಕ ಸಂಚಾರ ಅಧೀಕ್ಷಕ ರವರ ಬಳಿ  ಬಂದು ಗೋಳಾಡಿರುತ್ತಾರೆ.
ನಂತರದಲ್ಲಿ ತಕ್ಷಣವೇ ಮಂಡ್ಯ ಘಟಕದ  ಘಟಕ ವ್ಯವಸ್ಥಾಪಕರೊಂದಿಗೆ ದೂರವಾಣಿ ಮಾತನಾಡಿ ಬಸ್‌ ಚಾಲಕ ಮಹೇಶ್ ಹಾಗೂ ನಿರ್ವಾಹಕ ಸೋಮಶೇಖರಪ್ಪ ಅವರ ಮೊಬೈಲ್ ಸಂಖ್ಯೆ ಯನ್ನು ಪಡೆದು ಮಾತನಾಡಿ ಬಸ್ಸಿನ 5 ನೆಯ ಸೀಟಿನಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ಗಳು ಇರುವುದಾಗಿ ತಿಳಿಸಿ ಅದನ್ನು ಹುಡುಕುವಂತೆ ಹೇಳಿ ಅದರೊಂದಿಗೆ 50500 ₹ ಹಣವು ಇರುವುದಾಗಿ ತಿಳಿಸಿ ಈಗಲೇ  ತನಿಖೆ ಮಾಡಿ ನೋಡು ಎಂದು  ತಿಳಿಸಿರುತ್ತಾರೆ. ನಿರ್ವಾಹಕ ಸೋಮಶೇಖರಪ್ಪ   ಹಣ  ಮತ್ತು ಸ್ಕ್ಯಾನಿಂಗ್ ರಿಪೋರ್ಟ್ ಇರುವುದಾಗಿ ತಿಳಿಸಿರುತ್ತಾರೆ. ನಂತರ ಚನ್ನಪಟ್ಟಣ ಘಟಕ  ವ್ಯವಸ್ಥಾಪಕರಿಂದ ಪೂರ್ಣ ಪ್ರಮಾಣದಲ್ಲಿ ಹಣವನ್ನು ಲೆಕ್ಕಾಚಾರ ಮಾಡಿಸಿ ಮಂಡ್ಯದಲ್ಲಿ ಪ್ರಯಾಣಿಕರ ಮಗಳಿಗೆ ಹಣವನ್ನು ಮತ್ತು ಸ್ಕ್ಯಾನಿಂಗ್ ರಿಪೋರ್ಟ್   ಕೊಡಿಸುವ ಕೆಲಸ ಮಾಡಿರುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರಪ್ರದೇಶ: ವಿಷ ಹಾಕಿ 300 ಬೀದಿನಾಯಿಗಳ ಹತ್ಯೆ?