Publish Date: Sun, 01 Aug 2021 (14:36 IST)
Updated Date: Sun, 01 Aug 2021 (14:37 IST)
ನಮ್ಮನ್ನು ವಲಸಿಗರು ಮತ್ತು ಬಾಂಬ್ ಬಾಯ್ಸ್ ಅಂತ ಕರೆಯಬೇಡಿ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಲಸಿಗ, ಬಾಂಬೆ ಬಾಯ್ಸ್ ಎನ್ನುವ ಶಬ್ದ ಬಿಡಿ. ನಾವು ಬಿಜೆಪಿ ಪಕ್ಷಕ್ಕೆ ಬಂದು ಗೆದ್ದು ಮಂತ್ರಿ ಆಗಿದ್ದೇವೆ. ಹೀಗಿದ್ದರೂ ನೀವು ನಮ್ಮನ್ನು ವಲಸಿಗರು ಎಂದು
ಕರೆಯೋದು ಬಿಡಲ್ವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಪುಟ ರಚನೆ ಆಗಲಿ, ಈ ಮೊದಲು ಇದ್ದ ಇಲಾಖೆ ಬಗ್ಗೆ ನಾನು ಚರ್ಚೆ ಮಾಡಿಲ್ಲ. ನಮ್ಮ ಕೆಲಸದ ಬಗ್ಗೆ ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಈಗಾಗಲೇ ಸಿಎಂ ಬೊಮ್ಮಾಯಿ ಅವರೇ ಹೇಳಿದ್ದಾರೆ ಎಂದು ಅವರು ಹೇಳಿದರು.
ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡ್ತೇನೆ ಅಂತ ಬೊಮ್ಮಾಯಿ ಅವರು ಹೇಳಿದ್ದಾರೆ. ನಮಗೆ ಸಚಿವ ಸ್ಥಾನ ನೀಡುವುದು ಹಾಗೂ ಸಚಿವ ಸ್ಥಾನ ನೀಡಿದರೆ ಯಾವ ಖಾತೆ ನೀಡಬೇಕು ಎಂಬುದನ್ನು ಅವರೇ ತೀರ್ಮಾನಿಸುತ್ತರೆ ಎಂದು ಬಿಸಿ ಪಾಟೀಲ್ ಹೇಳಿದರು.