Chikkaballapur: ರೇಪ್ ಮಾಡಲೆತ್ನಿಸಿದ ದುರುಳರಿಂದ ಯುವತಿ ಪಾರಾಗಿದ್ದೇ ರೋಚಕ

Sampriya
ಗುರುವಾರ, 7 ನವೆಂಬರ್ 2024 (18:32 IST)
ಚಿಕ್ಕಾಬಳ್ಳಾಪುರ: ಬೆಂಗಳೂರಿನ ಯೋಗ ಶಿಕ್ಷಕಿಯನ್ನು ಅಪಹರಿಸಿ, ಅತ್ಯಾಚಾರಕ್ಕೆ ಯತ್ನಿಸಿ ನಂತರ ಜೀವಂತವಾಗಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಮಾಲೀಕ ಸತೀಶ್ ರೆಡ್ಡಿ, ರಮಣ, ಸಲ್ಮಾನ್, ರವಿ ಎಂಬುವವರನ್ನು ದಿಬ್ಬೂರಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ಅಪಹರಣಕ್ಕೊಳಗಾಗಿದ್ದ ಯೋಗ ಶಿಕ್ಷಕಿ ಮೂಲತಃ ದೇವನಹಳ್ಳಿ ತಾಲ್ಲೂಕಿನವರಾಗಿದ್ದು, ಮದುವೆಯಾಗಿ ಪ್ರತ್ಯೇಕವಾಗು ವಾಸವಿದ್ದರು.

ಯೋಗ ಶಿಕ್ಷಕಿಯ ಕೊಲೆಗೆ ಆಕೆಯ ಪ್ರಿಯಕರ ಸಂತೋಷ್ ಕುಮಾರ್‌ ಪತ್ನಿ ಸುಪಾರಿ ನೀಡಿದ ಆರೋಪ ಕೇಳಿಬಂದಿದೆ.  ಆರೋಪಿ ಸತೀಶ್ ರೆಡ್ಡಿ ಶಿಕ್ಷಕಿ ಬಳಿ ಯೋಗ ಕಲಿಯುವುದಕ್ಕೆ ಹೋಗುತ್ತಿದ್ದ. ನಂತರ ಗನ್ ತರಬೇತಿ ನೀಡುವುದಾಗಿ ಮನೆಗೆ ಬಂದಿದ್ದ. ಕೊಪ್ಪಳದಲ್ಲಿ ಕಾರು ಕದ್ದು, ಸುಫಾರಿ ಪಡೆದು ಯೋಗ ಶಿಕ್ಷಕಿಯನ್ನು ಕಿಡ್ಯ್ನಾಪ್ ಮಾಡಿದ್ದಾನೆ.

ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಆದರೆ ಶಿಕ್ಷಕಿ ಒಪ್ಪದಿದ್ದಾಗ ಸ್ನೇಹಿತರ ಕರೆಸಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಲಾಗಿದೆ. ಶಿಕ್ಷಕಿ ಸತ್ತು ಹೋಗಿದ್ದಾಳೆಂದು ಭಾವಿಸಿ ಗುಂಡಿ ತೋಡಿ ಆಕೆಯ ಮೇಲೆ ಮರದ ಕೊಂಬೆಗಳನ್ನು ಹಾಕಿ ಹೋಗಿದ್ದರು. ಅದುವರೆಗೂ ಸತ್ತಂತೆ ನಟಿಸಿ, ದುಷ್ಕರ್ಮಿಗಳು ಹೋದ ಬಳಿಕ ಗುಂಡಿಯಿಂದ ಎದ್ದು ಹೊರಬಂದಿದ್ದರು.

ಬಳಿಕ ಸ್ಥಳೀಯರಿಂದ ಬಟ್ಟೆ ಪಡೆದು ದಿಬ್ಬೂರಹಳ್ಳಿ ಠಾಣೆಗೆ ಆಗಮಿಸಿದ್ದಾರೆ. ಕೊಲೆಗೆ ಯತ್ನ, ಅಪಹರಣ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ದೂರು ನೀಡಿದ್ದಾರೆ.

ಮಹಿಳೆ ದೂರು ಆಧರಿಸಿ ಆರೋಪಿಗಳ ಪತ್ತೆಗೆ ಚಿಕ್ಕಬಳ್ಳಾಪುರ ಎಸ್​ಪಿ ಕುಶಾಲ್ ಚೌಕ್ಸೆ ಬಳಿಕ ವಿಶೇಷ ತನಿಖಾ ತಂಡ ರಚಿಸಿ ಸದ್ಯ ಆರೋಪಿಗಳನ್ನು ಬಂಧಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments