Publish Date: Mon, 31 Oct 2022 (16:46 IST)
Updated Date: Mon, 31 Oct 2022 (16:50 IST)
ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಶ್ರೀಗಳಿಗೆ ಹನಿಟ್ರ್ಯಾಪ್ ನಡೆಸಿದ್ದ ಗ್ಯಾಂಗ್ ಅಂದರ್ ಆಗಿದ್ದು, ರಾಮನಗರದ ಜೈಲಿನಿಂದ ಆರೋಪಿಗಳನ್ನ ಕರೆತಂದ ಪೊಲೀಸರು ಮಾಗಡಿಯ 1ನೇ JMFC ಕೋರ್ಟ್‌ಗೆ ಆರೋಪಿಗಳ ಹಾಜರು ಪಡಿಸಲಾಯಿತು. ನಂತರ ಕೋರ್ಟ್ ಆರೋಪಿಗಳನ್ನು ನವೆಂಬರ್ 4ರ ತನಕ ಪೊಲೀಸ್ ಕಸ್ಟಡಿಗೆ ವಹಿಸಿದೆ. ಆತ್ಮಹತ್ಯೆಗೂ ಮುನ್ನ 6 ಪುಟಗಳ ಡೆತ್‌ನೋಟ್ ಅನ್ನು ಶ್ರೀಗಳು ಬರೆದಿದ್ದು, 6 ಪುಟಗಳ ಪೈಕಿ 3 ಪುಟಗಳ ಡೆತ್‌ನೋಟ್ ಪವರ್ ಟಿವಿಗೆ ಲಭ್ಯವಾಗಿದೆ. ಡೆತ್‌ನೋಟ್‌ನಲ್ಲಿ ಹನಿಟ್ರ್ಯಾಪ್ ಬಗ್ಗೆ ಎಳೆಎಳೆಯಾಗಿ ಉಲ್ಲೇಖ ಮಾಡಲಾಗಿದ್ದು, ಡೆೆತ್‌ನೋಟ್‌ನಲ್ಲಿ ಪ್ರಭಾವಿ ಮುಖಂಡನ ಹೆಸರನ್ನು ಉಲ್ಲೇಖಿಸಲಾಗಿದೆ. ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಸ್ಫೋಟಕ ಮಾಹಿತಿ ಬಯಲಾಗಲಿದೆ.