Select Your Language

Notifications

webdunia
webdunia
webdunia
webdunia

ಹೊಸ ದಾಖಲೆ ಬರೆದ ರಾಜ್ಯದ ರೈಲು

ಹೊಸ ದಾಖಲೆ ಬರೆದ ರಾಜ್ಯದ ರೈಲು
ಹುಬ್ಬಳ್ಳಿ , ಬುಧವಾರ, 22 ಜುಲೈ 2020 (18:56 IST)
ರಾಜ್ಯದ ರೈಲೊಂದು ಹೊಸ ದಾಖಲೆ ಬರೆದಿದೆ.

ಬರೋಬ್ಬರಿ 1.25 ಕಿ.ಮೀ ಅತಿ ಉದ್ದದ್ದ ಗೂಡ್ಸ್ ರೈಲು ಹೊಂದುವ ಮೂಲಕ ನೈರುತ್ಯ ರೈಲ್ವೆ ವಲಯವು ತನ್ನ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.

ಹೊಸಪೇಟೆಯಿಂದ ಗೋವಾದ ತಿನೈಘಾಟ್ ವರೆಗೆ ಜು.19 ರಂದು ಈ ಗೂಡ್ಸ್ ರೈಲನ್ನು ಯಶಸ್ವಿಯಾಗಿ ಓಡಿಸಲಾಗಿದೆ. ಇದರಿಂದ ಹೆಚ್ಚು ಸರಕುಗಳನ್ನು ಸಾಗಿಸುವುದರ ಜತೆಗೆ, ಇತರ ರೈಲುಗಳ ದಟ್ಟಣೆ ಕಡಿಮೆ ಮಾಡಬಹುದಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅತಿ ಉದ್ದದ ರೈಲು ಒಟ್ಟು 117 ವ್ಯಾಗನ್,  4 ಲೋಕೊಮೋಟಿವ್ ಬೃಹತ್ ಎಂಜಿನ್‌ಗಳನ್ನು ಹೊಂದಿದ್ದು, ಸರಕು ತುಂಬಿದ ಹಾಗೂ ಖಾಲಿಯಾಗಿಯೂ ಓಡಿಸಲಾಗಿದೆ. ಗಂಟೆಗೆ ಸರಾಸರಿ 5 ಕಿ.ಮೀ. ಸಂಚರಿಸಲಿದೆ.

ಎಂಜಿನೀಯರ್‌ಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಲಯದ  ಜಿಎಂ ಅಜಯಕುಮಾರ್ ಸಿಂಗ್, ಮಾರ್ಗಗಳಲ್ಲಿ ರೈಲುಗಳ ಸಾಮರ್ಥ್ಯ ಹೆಚ್ಚಿಸಲಿದೆ. ಅಲ್ಲದೆ ವೇಗ ಸಂಚಾರಕ್ಕೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ನಿರ್ಮಾಣಕ್ಕೆ ರಂಭಾಪುರಿ ಪೀಠದ ಮಣ್ಣು