ರಾಜ್ಯದ ಜನ ಮೈತ್ರಿ ಪರವಾಗಿದ್ದಾರೆ ಎಂದ ಸಿಎಂ

ಮಂಗಳವಾರ, 6 ನವೆಂಬರ್ 2018 (16:38 IST)
ಉಪಚುನಾವಣೆ ಫಲಿತಾಂಶದ ಬಗ್ಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ರಾಜ್ಯದ ಜನರು ಮೈತ್ರಿ ಪಕ್ಷದ ಪರವಾಗಿದ್ದಾರೆ ಎಂದಿದ್ದಾರೆ.

ಸಿಎಂ ಕುಮಾರಸ್ವಾಮಿ ಮಾತನಾಡಿ, ನಾಲ್ಕು ಕ್ಷೇತ್ರದಲ್ಲಿ ನಮಗೆ ಭರ್ಜರಿ ಗೆಲುವಾಗಿದ್ದರೆ ಶಿವಮೊಗ್ಗ ಕ್ಷೇತ್ರದಲ್ಲಿ ನೈತಿಕ ಗೆಲುವಾಗಿದೆ.    ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯನ್ನು ಅಪವಿತ್ರ ಎಂದು ಕರೆಯುತ್ತಿದ್ದ ಬಿಜೆಪಿಯವರಿಗೆ ಈ ಫಲಿತಾಂಶವು ತಕ್ಕ ಉತ್ತರ ಕೊಟ್ಟಿದೆ ಎಂದು ಕುಮಾರಸ್ವಾಮಿ ಹೇಳಿದರು.  

ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಒಕ್ಕೂರಲಿನಿಂದ ಒಮ್ಮತದ ಅಭ್ಯರ್ಥಿಗಳನ್ನು ಆರಿಸಿ ಚುನಾವಣೆ ಎದುರಿಸುವುದು ಮಿತ್ರ ಪಕ್ಷಗಳ ಗುರಿ ಆಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೈ ಪಾಳೆಯದ ಕಾರ್ಯಕರ್ತರಿಗೆ ಕಾರ್ಯಾಗಾರ