Select Your Language

Notifications

webdunia
webdunia
webdunia
webdunia

ಸರ್ಕಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಅಭಿಯಾನಕ್ಕಿಳಿದ ರಾಜ್ಯ ಕಾಂಗ್ರೆಸ್

ಸರ್ಕಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಅಭಿಯಾನಕ್ಕಿಳಿದ ರಾಜ್ಯ ಕಾಂಗ್ರೆಸ್
bangalore , ಶುಕ್ರವಾರ, 25 ನವೆಂಬರ್ 2022 (20:56 IST)
ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರಿಗೆ 40 % ಕಮಿಷನ್ ಅಭಿಯಾನ ತಲುಪಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್  ವಿಭಿನ್ನ ರೀತಿಯಲ್ಲಿ ಅಭಿಯಾನ ಮಾಡಿದೆ.ಕಾಂಗ್ರೆಸ್ ಅಧಿಕೃತ ಸಾಮಾಜಿಕ ಜಾಲತಾಣ ಬಿಟ್ಟು ಬೇರೆ ಖಾತೆಗಳ ಮೂಲಕ ಅಭಿಯಾನ ಆರಂಭಿಸಿದೆ.ಬೇರೆ ಅಕೌಂಟ್ ಗಳ ಮೂಲಕ 40% ಕಮಿಷನ್ ಅಭಿಯಾ 40% ಸರ್ಕಾರ ಎಂದು ಫೇಸ್ ಬುಕ್ ಪೇಜ್ ರಚನೆ ಮಾಡಿದೆ.ಈ ಪೇಜ್ ಗೆ ಲಕ್ಷಾಂತರ ಫಾಲೋ ವರ್ಸ್ ಇದ್ದಾರೆ.ಆದರೆ ಇದು ಕಾಂಗ್ರೆಸ್ ಅಭಿಯಾನ ಎಂದು ಬಹಳ ಸ್ಪಷ್ಟವಾಗಿ ತಿಳಿಯುತ್ತದೆ.
 
40% ಸರ್ಕಾರ ಫೇಸ್ ಬುಕ್ ಫೇಜ್ ಕಾಂಗ್ರೆಸ್ ಹೆಲ್ಪ್ ಲೈನ್ ನಂಬರ್ ಇದೆ.ಸೆಪ್ಟೆಂಬರ್ 13ರಂದು ಡಿಕೆಶಿ,ಸಿದ್ದು ಸುದ್ದಿಗೋಷ್ಟಿ ನಡೆಸಿ ಬಿಡುಗಡೆ ಮಾಡಿದ್ದ ನಂಬರ್ 8447704040 ಇದೆ. ನಂಬರ್ ಹೆಲ್ಪ್ ಲೈನ್ ಎಂದು ಕೈನಾಯಕರು ಬಿಡುಗಡೆ ಮಾಡಿದರು.ಇದೀಗ ಆ ನಂಬರ್ ಇರುವ 40%  ಸರ್ಕಾರ ಎಂಬ ಫೇಜ್ ನಿಂದ ವಿಭಿನ್ನ ರೀತಿಯ ಅಭಿಯಾನ ಶುರುವಾಗಿದೆ.
 
40% ಕಮಿಷನ್ ರೋಡಲ್ಲಿ ಯಮ ಗುಂಡಿ, ಯಾಮಾರಿ ಬಿದ್ರೆ ಮುಗೀತು ಜೀವನ ಬಂಡಿ ಎಂದು ಪೋಸ್ಟರ್ ನಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಯಮನಂತೆ ಕಾಂಗ್ರೆಸ್ ಬಿಂಬಿಸಿದೆ.ವಿವಿಧ ಸಿನಿಮಾಗಳ ಹೆಸರಿನ ಮೂಲಕ ಸಿಎಂ ಹಾಗೂ ಸಚಿವರ  ವಿರುದ್ಧ ಅಭಿಯಾನ ನಡೆದಿದ್ದು, ಕಿಲಾಡಿ ಜೋಡಿ ಎಂದು ಸಿಎಂ ಹಾಗೂ ಸಚಿವ ಅಶ್ವಥ್ ನಾರಾಯಣ್ ಪೋಸ್ಟರ್ ರಚನೆಯಾಗಿದೆ.ಸರ್ವರ್ ಸೋಮಣ್ಣ ಎಂದು ಸಚಿವ ವಿ ಸೋಮಣ್ಣ  ಪೋಸ್ಟರ್  ಕೂಡ ರಚನೆಯಾಗಿದೆ.ಚಪಲ ಚನ್ನಿಗರಾಯ ಎಂದು ರಮೇಶ್ ಜಾರಕಿಹೊಳಿಯ ಪೋಸ್ಟರ್ ರಚನೆಯಾಗಿದೆ.ಅಡುಗೆ ಭಟ್ಟರಂತೆ ಸಚಿವ ಬಿಸಿ ನಾಗೇಶ್ ಪೋಸ್ಟರ್ ರಚನೆಯಾಗಿದೆ.ಹೀಗೆ ವಿಭಿನ್ನ ರೀತಿಯಲ್ಲಿ 40% ಸರ್ಕಾರ ಎಂಬ ಫೇಜ್ ಮೂಲಕ ಸರ್ಕಾರದ ವಿರುದ್ಧ ಅಭಿಯಾನ ಮಾಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಹಲವೆಡೆ 4-5 ದಿನ ಮಳೆ ಸಾಧ್ಯತೆ