Select Your Language

Notifications

webdunia
webdunia
webdunia
webdunia

ಇನ್ಶೂರೆನ್ಸ್‌ ಹಣಕ್ಕಾಗಿ ಅಮ್ಮನನ್ನೇ ಕೊದು ನದಿಗೆ ಎಸೆದ ಮಗ

ಯಮುನಾ ನದಿ

geetha

ಫತೇಹ್‌ ಪುರ , ಭಾನುವಾರ, 25 ಫೆಬ್ರವರಿ 2024 (19:26 IST)
ಫತೇಹ್‌ ಪುರ: ಹಿಮಾಂಶು ಎಂಬಾತ ತಾಯಿಯನ್ನು ಕೊಂದ ಸುಪುತ್ರನಾಗಿದ್ದು,  ತನ್ನ ತಾಯಿ ಪ್ರಭಾರನ್ನು ಹತ್ಯೆಗೈದಿದ್ದಾನೆ.ಆನ್‌ ಲೈನ್‌ ಜೂಜಿನ ಚಟದಿಂದ ಮೈತುಂಬಾ ಸಾಲ ಮಾಡಿಕೊಂಡಿದ್ದ  ಜೀವವಿಮೆಯ ಹಣಕ್ಕಾಗಿ ತನ್ನ ತಾಯಿಯನ್ನೇ ಕೊಂದಿರುವ ಘಟನೆ ಫತೇಹ್‌ ಪುರದಲ್ಲಿ ನಡೆದಿದೆ. ಝುಪೀ ಎಂಬ ಆನ್‌ಲೈನ್‌ ಜೂಜಿನ ಚಟದಿಂದಾಗಿ ಹಿಮಾಂಶು 4 ಲಕ್ಷ ರೂ ಸಾಲ ಮಾಡಿಕೊಂಡಿದ್ದ. ಇದಕ್ಕೆ ಖತರ್ನಾಕ್‌ ಪ್ಲಾನ್‌ ಮಾಡಿದ ಹಿಮಾಂಶು ತನ್ನ ಚಿಕ್ಕಮ್ಮನ್ನ ಬಳಿ ಆಭರಣಗಳನ್ನು ಕದ್ದು,  ತನ್ನ ತಾಯಿ ಪ್ರಭಾ ಹೆಸರಿನಲ್ಲಿ 50 ಲಕ್ಷ ರೂ. ಮೊತ್ತದ ಜೀವವಿಮೆ ಮಾಡಿಸಿದ್ದ. ಬಳಿಕ  ತನ್ನ ತಾಯಿಯನ್ನು ಹತ್ಯೆಗೈದು ಶವವನ್ನು ಯಮುನಾ ನದಿಗೆ ಎಸೆದಿದ್ದ. 

ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಹಿಮಾಂಶು ಬಗ್ಗೆ ಸಂಶಯ ವ್ಯಕ್ತವಾಗಿದ್ದು, ವಿಚಾರಣೆಯಲ್ಲಿ ನಿಜಸಂಗತಿ ಬಯಲಿಗೆ ಬಂದಿದೆ. ಹಿಮಾಂಶುವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಂಕ್‌ & ಡ್ರೈವ್‌ ಆರೋಪದಡಿ ಪೊಲೀಸರ ಸುಲಿಗೆ